ಉಳ್ಳಾಲದಲ್ಲಿ ಎಪಿ ಉಸ್ತಾದ್‌ರ ಕೇರಳ ಯಾತ್ರೆಗೆ ಚಾಲನೆ

ಉಳ್ಳಾಲ: ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕು, ಮಾನವೀಯ ಮೌಲ್ಯಗಳು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕೇರಳ ಯಾತ್ರೆ ಆರಂಭಿಸಲಾಗಿದೆ ಮನುಷ್ಯ ರೊಂದಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಯಾತ್ರೆ ನಡೆಯಲಿದೆ. ತಾಜುಲ್ ಉಲಮಾ ಉಳ್ಳಾಲ ತಂಙಳ್ ಶಿಕ್ಷಣ ಕೈ ಒತ್ತು ನೀಡಿದ್ದರು. ಅದನ್ನು ಉಳಿಸುವ ಕಾರ್ಯ ನಮ್ಮಿಂದ ಆಗಬೇಕು ಎಂದು ಉಳ್ಳಾಲ ಸಂಯುಕ್ತ ಖಾಝಿ ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಅವರು ಮನುಷ್ಯರೊಂದಿಗೆ ಎಂಬ ಧ್ಯೇಯವಾಕ್ಯದಲ್ಲಿ ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಆಯೋಜಿಸಿರುವ ಕೇರಳ ಯಾತ್ರೆಗೆ ಗುರುವಾರ ಮಧ್ಯಾಹ್ನ ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಚಾಲನೆ ನೀಡಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಮನುಷ್ಯತ್ವ ಉಳಿಯಬೇಕು.ಅರಾಜಕತೆ,ಅಧರ್ಮ ನಮಗೆ ಬೇಡ.ಇದನ್ನು ಅಳಿಸಿ ಜನರು ಸನ್ಮಾರ್ಗದಲ್ಲಿ ನಡೆಯಬೇಕು.ಐಕ್ಯತೆ ಬೆಳೆಯಬೇಕು ಎಂದು ಕರೆ ನೀಡಿದರು.
ಅಸಯ್ಯಿದ್ ಇಬ್ರಾಹೀಮ್ ಖಲೀಲ್ ತಂಙಳ್ ಕಡಲುಂಡಿ ಮಾತನಾಡಿ, ಎ.ಪಿ. ಉಸ್ತಾದ್ ಅವರ ನೇತೃತ್ವದಲ್ಲಿ ಇಂದು ನಡೆಯುವುದು ಮೂರನೇ ಯಾತ್ರೆ ಆಗಿದೆ. ಮನುಷ್ಯರೊಂದಿಗೆ ಎಂಬ ಧ್ಯೇಯ ವಾಕ್ಯ ಇಟ್ಟುಕೊಂಡು ಈ ಯಾತ್ರೆ ಆರಂಭಗೊಂಡಿದ್ದು, ಚೆರ್ಕಳ ದಲ್ಲಿ ಉದ್ಘಾಟನೆ ನಡೆಯಲಿದೆ. ಜ16 ರಂದು ತಿರುವನಂತಪುರಂ ನಲ್ಲಿ ಸಮಾಪ್ತಿ ಗೊಳ್ಳಲಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸ್ಪೀಕರ್ ಯುಟಿ ಖಾದರ್ ಮಾತನಾಡಿ, ಈ ಕೇರಳ ಯಾತ್ರೆ ದರ್ಗಾ ಝಿಯಾರತ್ ನೊಂದಿಗೆ ಆರಂಭಗೊಂಡಿದ್ದು, ಉಳ್ಳಾಲ ದರ್ಗಾ ಕರ್ನಾಟಕ ಮತ್ತು ಕೇರಳ ಕ್ಕೆ ಸೌಹಾರ್ದಕೊಂಡಿಯಾಗಿ ಬೆಳೆಯ ಲಿದೆ. ಮನುಷ್ಯತ್ವ ಉಳಿಸುವ ನಿಟ್ಟಿನಲ್ಲಿ ನಡೆಯುವ ಈ ಯಾತ್ರೆ ಯಿಂದ ದೇಶಕ್ಕೆ ಪ್ರಯೋಜನ ಸಿಗಲಿದೆ ಎಂದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮ ದಲ್ಲಿ ಸಯ್ಯಿದ್ ಆಟಕೋಯ ತಂಙಳ್ ಕುಂಬೋಲ್ , ರಈಸುಲ್ ಉಲಮಾ ಇ. ಸುಲೈಮಾನ್ ಉಸ್ತಾದ್, ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್, ಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್ ಊದ್ ತಂಙಳ್, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಅಶ್ರಫ್ ತಂಙಳ್ ಆದೂರು, ಡಾ.ಹಕೀಮ್ ಅಝ್ಹರಿ, ಹೈದರ್ ಪರ್ತಿಪ್ಪಾಡಿ, ಅತ್ತಾವುಲ್ಲ ತಂಙಳ್ ಉದ್ಯಾವರ, ಯುಟಿ ಇಫ್ತಿಕಾರ್, ಯೆನೆಪೋಯ ಕುಲಪತಿ ಅಬ್ದುಲ್ಲಾ ಕುಂಞಿ ಹಾಜಿ, ಮಂಜೇಶ್ವರ ಶಾಸಕ ಅಶ್ರಫ್, ಸಿದ್ದೀಕ್ ಮೋಂಟುಗೋಳಿ, ಎಸ್ ಎಂ ರಶೀದ್ ಹಾಜಿ, ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು, ಯು.ಎಸ್. ಹಂಝ ಹಾಜಿ,ದರ್ಗಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ , ಕೋಶಾಧಿಕಾರಿ ನಾಝಿಮ್ ರಹ್ಮಾನ್, ಕಾರ್ಯದರ್ಶಿ ಮುಹಮ್ಮದ್ ಇಸಾಕ್, ಮುಸ್ತಫಾ ಮದನಿ ನಗರ , ಅಬ್ಬಾಸ್ ಕೋಟೆಪುರ, ಮುಸ್ತಫಾ ಅಬ್ದುಲ್ಲಾ, ಅಲ್ತಾಫ್ ಹಳೆಕೋಟೆ, ಹಮೀದ್ ಬಸ್ತಿಪಡ್ಪು, ಆಸೀಫ್ ಅಳೇಕಲ ಹಮೀದ್ ಪೇಟೆ, ಎಸ್ ಕೆ ಖಾದರ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.







