ಕಾಣೆಯಾದ ವ್ಯಕ್ತಿಯ ಪತ್ತೆಗೆ ಮನವಿ

ಮಂಗಳೂರು : ನಗರದ ಉಜ್ಜೋಡಿಯ ಸುವಿಧಾ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ ನವೀನ್ (32) ಎಂಬವರು 2019ರ ನ.19ರಿಂದ ಕಾಣೆಯಾಗಿದ್ದಾರೆ.
ಅಂದು ಮನೆಯಿಂದ ಶಿರಡಿಗೆ ಹೋಗಿ ಬರುವುದಾಗಿ ಹೇಳಿ ಹೊರ ಹೋದವರು ಮರಳಿ ಬಂದಿಲ್ಲ.
ಗೋಧಿ ಮೈ ಬಣ್ಣ, ಸಾಧಾರಣ ಶರೀರ, ದುಂಡು ಮುಖ, ಬಲ ಕೈಯ ರಟ್ಟೆಯಲ್ಲಿ ಎತ್ತಿನ ತಲೆಯ ನೀಲಿ ಬಣ್ಣದ ಟ್ಯಾಟೋ ಇತ್ತು. ಕಾಣೆಯಾದ ದಿನ ನೀಲಿ ಬಣ್ಣದ ಟಿ ಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ತುಳು, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ತಿಳಿದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





