ಗಾಂಜಾ ಮಾರಾಟಕ್ಕೆ ಯತ್ನ ಪ್ರಕರಣ: ಇಬ್ಬರ ಬಂಧನ

ಮಂಗಳೂರು, ಜ.15: ಯೆಯ್ಯಾಡಿ ಸಮೀಪದ ಹರಿಪದವು ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಅಂದಾಜು 35,000 ರೂ ಮೌಲ್ಯದ ಸುಮಾರು 1 ಕೆ.ಜಿ 85 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಗದೀಶ ಅಲಿಯಾಸ್ ಜಗ್ಗ (28) ಮತ್ತು ಚೇತನ್ (25) ಬಂಧಿತ ಆರೋಪಿಗಳು. ಜ.14ರಂದು ಸಂಜೆ 3.30ರ ವೇಳೆಗೆ ಕದ್ರಿ ಠಾಣೆ ಪೊಲೀಸ್ ಉಪ ನಿರೀಕ್ಷಕಿ ಪ್ರತಿಭಾ ಕೆ.ಎಚ್. ಅವರಿಗೆ ದೊರೆತ ಮಾಹಿತಿಯಂತೆ ಹರಿಪದವಿನ ಗುರುಬಾವು ಎಂಬ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ಈ ವೇಳೆ ಅಲ್ಲಿನ ಒಳರಸ್ತೆಯಲ್ಲಿ ದ್ವಿಚಕ್ರ ವಾಹನವೊಂದನ್ನು ನಿಲ್ಲಿಸಿ ಇಬ್ಬರು ಗಾಂಜಾ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ವಶಕ್ಕೆ ಪಡೆದು ಅವರಲ್ಲಿದ್ದ ಮಾದಕವಸ್ತು ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





