ಟೋಲ್ ಗೇಟ್ ಸಿಬ್ಬಂದಿಯಿಂದ ಹಲ್ಲೆಗೆ ಯತ್ನ ಆರೋಪ; ಪ್ರಕರಣ ದಾಖಲು

ಉಳ್ಳಾಲ: ತಲಪಾಡಿ ಟೋಲ್‌ಗೇಟ್ ಸಿಬ್ಬಂದಿ ಕಾರು ಚಾಲಕರೋರ್ವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಕಾರು ಚಾಲಕ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಅಬ್ದುಲ್ ಕರೀಂ ಎಂಬವರ ಕಾರಿನ ಫಾಸ್ಟ್ ಟ್ಯಾಗ್ ನಿಂದ ಹಣ ಕಡಿತಗೊಂಡಿದೆ. ಆದರೂ ಸಿಬ್ಬಂದಿ ಗೇಟ್ ತೆರೆಯದ ಕಾರಣ ಕರೀಂ ಪ್ರಶ್ನಿಸಿದ್ದಾರೆ. ಈ ಸಂದರ್ಭ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಇದನ್ನು ಪ್ರಶ್ನಿಸಿದ ಕರೀಂ ಅವರ ಮೇಲೆ ಕೋಪಗೊಂಡ ಸಿಬ್ಬಂದಿ, ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ಈ ಬಗ್ಗೆ ಕರೀಂ ಅವರು ಟೋಲ್‌ಗೇಟ್ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Next Story





