ಆ.10: ಶಾಸಕ ಐವನ್ ಡಿಸೋಜ ಕಾರ್ಯಕ್ರಮ

ಮಂಗಳೂರು, ಆ.9: ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ ಸ್ಥಾಪಿಸ ಲ್ಪಟ್ಟ 5 ಬಸ್‌ಗಳ ತಂಗುದಾಣ, 4 ರಿಕ್ಷಾ ನಿಲ್ದಾಣಗಳ ಉದ್ಘಾಟನಾ ಕಾರ್ಯಕ್ರಮವು ಆ.10ರಂದು ನಡೆಯಲಿದೆ.
ಬೆಳಗ್ಗೆ 9ಕ್ಕೆ ವೆಲೆನ್ಸಿಯಾ ಜೀರೋಸ ಶಾಲೆಯ ಬಳಿ ನೂತನವಾಗಿ ನಿರ್ಮಾಣಗೊಂಡ ಆಟೊ ರಿಕ್ಷಾ ನಿಲ್ದಾಣ, 9:30ಕ್ಕೆ ವೆಲೆನ್ಸಿಯಾ ಜೆರೋಸ ಶಾಲೆಯ ಬಳಿ ನೂತನವಾಗಿ ನಿರ್ಮಾಣಗೊಂಡ 2 ಬಸ್ ಪ್ರಯಾಣಿಕರ ತಂಗು ದಾಣ, ಬೆಳಗ್ಗೆ 9:45ಕ್ಕೆ ಜೆಪ್ಪುಜೋಸೆಫ್ ನಗರ (ಡಬಲ್ ಗೇಟ್) ಬಳಿ, ಬೆಳಗ್ಗೆ 10ಕ್ಕೆ ವೆಲೆನ್ಸಿಯಾ ರೋಶನಿ ನಿಲಯ ಕಾಲೇಜು ಬಳಿ, ಬೆಳಗ್ಗೆ 10:30ಕ್ಕೆ ವೆಲೆನ್ಸಿಯಾ ವೃತ್ತ ಬಳಿ ನೂತನವಾಗಿ ನಿರ್ಮಾಣಗೊಂಡ ಬಸ್ ಪ್ರಯಾಣಿಕರ ತಂಗುದಾಣಗಳ ಉದ್ಘಾಟನೆ ಹಾಗೂ ಪೂ.11ಕ್ಕೆ ಬೊಂದೆಲ್ ವೃತ್ತ ಬಳಿ, ಮಧ್ಯಾಹ್ನ 12ಕ್ಕೆ ಶಕ್ತಿನಗರ ಕಾರ್ಮಿಕ ಕಾಲನಿ ಆಟೋ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





