ಆ.17: ಪಿ.ಎ ಇಂಜನಿಯರಿಂಗ್ ಕಾಲೇಜು ಹಳೆ ವಿದ್ಯಾರ್ಥಿಗಳಿಂದ 'ಕ್ರೀಡಾ-ಪುನರ್ಮಿಲನ' ಕಾರ್ಯಕ್ರಮ

ಕೊಣಾಜೆ: ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘಟನೆಯಾದ ಪಿಎಸಿಇ ನೆಕ್ಸ್ಟ್ ಅವರಿಂದ "ಸ್ಪೋರ್ಟ್ಸಗಾ - ಟರ್ಫ್ ಎಡಿಷನ್" ಎಂಬ ವಿಭಿನ್ನ ಕ್ರೀಡಾ-ಪುನರ್ಮಿಲನ ಕಾರ್ಯಕ್ರಮವು ಆ.17 ರಂದು ಪಾಂಡೇಶ್ವರದ 'ದಿ ಫುಟ್ಸಾಲ್ ಡಾಗೌಟ್' ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವು ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಕ್ರಿಕೆಟ್, ಫುಟ್ಬಾಲ್, ತ್ರೋಬಾಲ್ ಮುಂತಾದ ಕ್ರೀಡೆಗಳೊಂದಿಗೆ ಸ್ನೂಕರ್ ಮತ್ತು ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷವಾಗಿ ಮನರಂಜನಾ ಆಟಗಳನ್ನು ಹಾಗೂ ಬಳಿಕ ಭೋಜನ ಕೂಟವನ್ನು ಕೂಡ ಆಯೋಜಿಸಲಾಗಿದೆ.
ಹಳೆಯ ವಿದ್ಯಾರ್ಥಿಗಳಲ್ಲಿ ಸ್ನೇಹದ ಬಾಂಧವ್ಯ ಪುನಶ್ಚೇತನ ಹಾಗೂ ಕಾಲೇಜಿನ 25 ವರ್ಷದ ಸಂಭ್ರಮವನ್ನು ಆಚರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





