ತುಂಬೆ ಐಟಿಐಯಲ್ಲಿ ಬಿ.ಎ. ಸಂಗಮ

ತುಂಬೆ: ಬಿ.ಎ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬಿ.ಎ ಸಂಗಮ ಕಾರ್ಯಕ್ರಮ ನಡೆಯಿತು. 2023-24ನೇ ವರ್ಷಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿ ಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಡಾ. ಸರೋಜಿನಿ ಆಚಾರ್, ಪ್ರಾಚಾರ್ಯರು ಸರಕಾರಿ ಪದವಿ ಪೂರ್ವ ಕಾಲೇಜು, ಪುಂಜಾಲಕಟ್ಟೆ ಪ್ರಯತ್ನದ ಮೂಲಕ ಯಶಸ್ಸನ್ನು ಸಾಧಿಸಿ ತಾಂತ್ರಿಕ ಶಿಕ್ಷಣದ ಮೂಲಕ ಪರಿಪೂರ್ಣ ಜೀವನ ಸಾಗಿಸಲು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಸೈಯ್ಯದ್ ಅಲ್ತಫ್ ಆಗಮಿಸಿ ಬಿ.ಎ ಕೈಗಾರಿಕಾ ತರಬೇತಿ ಸಂಸ್ಥೆ ಬಡವರ ಪಾಲಿಗೆ ವರದಾನವಾಗಿದೆ ಎಂದು ಅಭಿಪ್ರಾಯ ಪಟ್ಟರು. ಇನ್ನೋರ್ವ ಅತಿಥಿ ಮಹಮ್ಮದ್ ಇರ್ಶಾದ್ ಸ್ಥಾಪಕರು ಮತ್ತು ಪ್ರಾಚಾರ್ಯರು, ಎಮಿನೆಂಟ್ ವಿದ್ಯಾ ಸಂಸ್ಥೆ, ಮೆಲ್ಕಾರ್ ಭಾಗವಹಿಸಿ ರಾಪ್ಟ್ರೀಯ ಸೇವಾ ಯೋಜನೆಯ ಮೂಲಕ ಅಪಾರ ಅನುಭವ ಹೊಂದಿದ ಬಿ.ಎ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿ ತಂಡ ಸಾರ್ವಜನಿಕರ ಪ್ರೀತಿಗೆ ಪಾತ್ರವಾಗಿದ್ದು ತಾಂತ್ರಿಕ ತರಬೇತಿ ಪಡೆದ ನುರಿತ ವಿದ್ಯಾರ್ಥಿಗಳಾದ ತಾವುಗಳು ಸಾಮಾಜಿಕ ಕಳಕಳಿಯಿಂದ ಹೆತ್ತವರ ಬೇಡಿಕೆಯನ್ನು ಪೂರೈಸಲು ಸಲಹೆ ಇತ್ತರು.
ಗಂಗಾಧರ ಆಳ್ವ ಪ್ರಾಚಾರ್ಯರು ಪದವಿ ಪೂರ್ವ ಕಾಲೇಜು, ತುಂಬೆ ಇವರು ಮಾತನಾಡಿ ಬಿ ಎ ಕೈಗಾರಿಕಾ ತರಬೇತಿ ರಾಪ್ಟ್ರೀಯ ಸೇವಾ ಯೋಜನೆಯ ಸಾಧನೆಗಳು ಆಡಳಿತ ಮಂಡಳಿ ಪ್ರಾಚಾರ್ಯರು ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆಯನ್ನು ಕೊಂಡಾಡಿ ಅಭಿನಂದಿಸಿದರು.
ಸದಾಶಿವ ಡಿ ತುಂಬೆ, ನಿವೃತ್ತ ವ್ಯವಸ್ಥಾಪಕರು ಎಂ. ಆರ್. ಪಿ. ಎಲ್. ಮಾತನಾಡಿ ಜಾಗತಿಕ ಮಟ್ಟದಲ್ಲಿ ತಾಂತ್ರಿಕ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿ, ಸಂಸ್ಥೆಯ ಅತ್ಯಂತ ಯಶಸ್ವೀ ನಿರ್ವಹಣೆ ಮತ್ತು ಅಭಿವೃದ್ಧಿ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಬಿ. ಅಬ್ದುಲ್ ಸಲಾಂ ಅಧ್ಯಕ್ಷರು, ಮುಹಿಯುದ್ದೀನ್ ಎಜುಕೇಷನಲ್ ಟ್ರಸ್ಟ್ (ರಿ) ತುಂಬೆ, ದ.ಕ ಅಧ್ಯಕ್ಷತೆ ವಹಿಸಿದ್ದರು.
ಐಟಿಐ ಕಾಲೇಜಿನ ಪ್ರಾಚಾರ್ಯರಾದ ನವೀನ್ ಕುಮಾರ ಕೆ. ಎಸ್. ಪ್ರಾಸ್ತಾವಿಕ ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು ಕಿರಿಯ ತರಬೇತಿ ಅಧಿಕಾರಿ ರವಿ ವಂದಿಸಿದರು ಹಾಗೂ ರಾಜೇಶ್ ಟಿ. ಕಾರ್ಯಕ್ರಮ ನಿರೂಪಣೆ ಮಾಡಿದರು.







