ಬದ್ರಿಯಾ ಜುಮಾ ಮಸೀದಿ ಬಂಗೇರಕಟ್ಟೆ: ನೂತನ ಅಧ್ಯಕ್ಷರಾಗಿ ಇಕ್ಬಾಲ್ ಬಂಗೇರಕಟ್ಟೆ, ಪ್ರ. ಕಾರ್ಯದರ್ಶಿಯಾಗಿ ಹನೀಫ್ ಟಿ.ಎಸ್ ಆಯ್ಕೆ

ಇಕ್ಬಾಲ್ ಬಂಗೇರಕಟ್ಟೆ - ಹನೀಫ್ ಟಿ.ಎಸ್
ಬಂಗೇರಕಟ್ಟೆ: ನೂರುಲ್ ಹುದಾ ಮದರಸ ವಠಾರದಲ್ಲಿ ನಡೆದ ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಆಡಳಿತ ಸಮಿತಿ ಸದಸ್ಯರ ಆಯ್ಕೆಯು ಶುಕ್ರವಾರ ನಡೆಯಿತು.
2026ನೇ ಸಾಲಿನ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಇಕ್ಬಾಲ್ ಬಂಗೇರಕಟ್ಟೆ, ಉಪಾಧ್ಯಕ್ಷರಾಗಿ ಹಕೀಂ ರೋಯಲ್, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಟಿ.ಎಸ್, ಕೋಶಾಧಿಕಾರಿಯಾಗಿ ಯೂಸುಫ್ ಬಳ್ಳಮಂಜ ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಹಮೀದ್ ಸಾಲುಮರ ಮತ್ತು ಇಕ್ಬಾಲ್ ರೋಯಲ್ ಅವರು ಆಯ್ಕೆಯಾದರು.
ಮೂರು ವರ್ಷಕ್ಕೊಮ್ಮೆ ನಡೆಯುವ ಗೌರವಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು ನೂತನ ಗೌರವಾಧ್ಯಕ್ಷರಾಗಿ ಇಸ್ಮಾಯಿಲ್ ಪಿ.ಕೆ ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.
Next Story





