ಬಜ್ಪೆ: ರಸ್ತೆ ರಸ್ತೆಗುಂಡಿಗೆ ಬಿದ್ದು ಕಾರು ಅಪಘಾತ; ಯುವಕ ಮೃತ್ಯು

ಬಜ್ಜೆ: ರಸ್ತೆ ಗುಂಡಿಯಿಂದಾಗಿ ಕಾರು ಮಗುಚಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಪೆರ್ಮುದೆ ಸಮೀಪ ರವಿವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಬಜ್ಪೆ ಚರ್ಚ್ ಸಮೀಪದ ಜೋಶ್ವಾ ಪಿಂಟೊ(27) ಮೃತಪಟ್ಟ ಯುವಕ. ಇವರೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ಸ್ನೇಹಿತರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಜೋಶ್ವಾ ಪಿಂಟೊ ಏಪ್ರಿಲ್ 20ರಂದು ಈಸ್ಟರ್ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ, ಮಂಗಳೂರಿನಿಂದ ತನ್ನ ಮಿತ್ರರೊಡನೆ ಕಾರಲ್ಲಿ ವಾಪಸ್ ಪೆರ್ಮುದೆ ಬರುತ್ತಿದ್ದರು. ಈ ವೇಳೆ ರಸ್ತೆಯಲ್ಲಿನ ಹೊಂಡಕ್ಕೆ ಕಾರು ಬಡಿದು, ನಿಯಂತ್ರಣ ಕಳೆದುಕೊಂಡು ತಿರುವಿನಲ್ಲಿ ತಲೆಕೆಳಗಾಗಿ ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ನಿಸ್ವಾರ್ಥ ಸಮಾಜ ಸೇವೆಯ ಮೂಲಕ ಮನೆ ಮಾತಾಗಿದ್ದ ಜೋಶ್ವಾ ಪಿಂಟೊ ಬಜ್ಪೆ ಚರ್ಚ್ ಸದಸ್ಯರಾಗಿದ್ದರು. ಅವರ ಅಂತ್ಯಕ್ರಿಯೆಯು ಏಪ್ರಿಲ್ 22ರಂದು ಮಂಗಳವಾರ ಸಂಜೆ 4 ಗಂಟೆಗೆ ಬಜ್ಪೆ ಸಂತ ಜೋಸೆಫರ ದೇವಾಲಯದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ.
Next Story





