ಬಜ್ಪೆ | ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಪ್ರಕರಣ ದಾಖಲು

ಮಂಗಳೂರು: ಇತ್ತೀಚೆಗೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನಾರ್ಲಪದವು ಎಂಬಲ್ಲಿ ನಡೆದ ದನದ ಮಾಂಸ ಅಕ್ರಮ ಸಾಗಾಟಗಾರನ ಮೇಲಿನ ಹಲ್ಲೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಗೂ ಅದಕ್ಕೆ ಕೊಲೆ ಬೆದರಿಕೆಯ ಕಮೆಂಟ್ ಮಾಡಿರುವವರ ವಿರುದ್ಧ ಬಜ್ಪೆ ಠಾಣಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
muslim__leader ಎಂಬ ಇನಸ್ಟಾಗ್ರಾಮ ಪೇಜ್ ನಲ್ಲಿ ಇಬ್ಬರು ಯುವಕರ ಪೋಟೋವನ್ನು ಹಾಕಿ ವರ್ಗ ವರ್ಗಗಳನ್ನು ಮತ್ತು ಸಮುದಾಯವನ್ನು ಪ್ರಚೋದಿಸುವಂತೆ ಉದ್ದೇಶ ಪೂರ್ವಕವಾಗಿ ಪೋಸ್ಟ್ ವೊಂದನ್ನು ಹಾಕಲಾಗಿದೆ. ಅದೇರೀತಿ ಈ ಪೋಸ್ಟ್ ಗೆ instg4ama ಎಂಬ ಇನ್ ಸ್ಟಾಗ್ರಾಮ್ ಐಡಿಯಿಂದ ಕೊಲೆ ಬೆದರಿಕೆಯಂತಹ ಕಮೆಂಟ್ ಮಾಡಲಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸರು ಮೊ.ನಂ 07/2026 ಕಲಂ 351(2), 351( 3), 352, 353(2),192 BNS-2023ರಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.





