ಬಜ್ಪೆ: ದ್ವಿಚಕ್ರ ವಾಹನದಲ್ಲಿ ತ್ರಿಪ್ಪಲ್ ರೈಡ್ ಮಾಡುತ್ತಿದ್ದ ಅಪ್ರಾಪ್ತರು; ಪೋಷಕರಿಗೆ ದಂಡ

ಬಜ್ಪೆ: ದ್ವಿಚಕ್ರ ವಾಹನದಲ್ಲಿ ತ್ರಿಪ್ಪಲ್ ರೈಡ್ ಸಂಚಾರ ಮಾಡುತ್ತಿದ್ದ ಮೂವರು ಅಪ್ರಾಪ್ತರನ್ನು ಪತ್ತೆಹಚ್ಚಿ ಪ್ರಕರಣದಲ್ಲಿ ನ್ಯಾಯಾಲಯವು ಪೋಷಕರಿಗೆ ಬೃಹತ್ ಮೊತ್ತದ ದಂಡ ವಿಧಿಸಿರುವ ಘಟನೆ ಸೆ.3ರಂದು ವರದಿಯಾಗಿದೆ.
ಬಜ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಸಿಬ್ಬಂದಿಯೊಂದಿಗೆ ಆ.28ರಂದು ಸಾಯಂಕಾಲ 6:35 ಗಂಟೆಯ ಸಮಯಕ್ಕೆ ಬಜ್ಪೆ ಪೇಟೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಒಂದು ದ್ವಿಚಕ್ರವಾಹನದಲ್ಲಿ ಮೂವರು ಅಪ್ರಾಪ್ತರು ಸಂಚರಿಸುತ್ತಿರುವುದನ್ನು ಪತ್ತೆ ಹಚ್ಚಿದ್ದರು.
ಬಳಿಕ ವಾಹನ ಸಹಿತ ಮೂವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪೋಷಕರು ದ್ವಿಚಕ್ರವಾಹನ ನೀಡಿರುವುದು ದೃಢಪಟ್ಟಿದೆ.
ಈ ಸಂಬಂಧ 199ಎ, 194ಸಿ, 194ಡಿ, 130 ಜೊತೆಗೆ 177 ಐಎಮ್‌ವಿ ಕಾಯ್ದೆಯಡಿಯಲ್ಲಿ ದೋಷರೋಪಣ ಪಟ್ಟಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯವು ಪೋಷಕರಿಗೆ 27,500 ರೂ. ದಂಡ ವಿಧಿಸಿ ಸೆ.3ರಂದು ತೀರ್ಪು ನೀಡಿದೆ.
Next Story





