ತುಳು ಸಾಹಿತ್ಯದಲ್ಲಿ ತುಳುನಾಡಿನ ಬದುಕಿನ ಮೌಲ್ಯಗಳು ಅಂತರ್ಗತ: ಡಾ.ಜ್ಯೋತಿ ಚೇಳಾರು

ಮಂಗಳೂರು:ತುಳು ಸಾಹಿತ್ಯ ಓದುವ ಮೂಲಕ ಬದುಕಿನ ಬಗ್ಗೆ ಅವಲೋಕನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ತುಳುವರ ಬದುಕು,ಅದರಲ್ಲಿ ಅಂತರ್ಗತವಾಗಿರುವ ಮೌಲ್ಯಗಳು, ಜೀವನ ಆದರ್ಶಗಳು ಅರ್ಥವಾಗುತ್ತದೆ ಎಂದು ಚೇಳಾರು ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಡಾ.ಜ್ಯೋತಿ ಚೇಳಾರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ಚೇಳಾರು ಸರಕಾರಿ ಪಪೂ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಬುಧವಾರ ನಗರದಲ್ಲಿ ಆಯೋಜಿಸಿದ ಱಅಕಾಡಮಿಡ್ ಒಂಜಿ ದಿನ-ಬಲೆ ತುಳು ಓದುಗ ಅಭಿಯಾನದ ೧೧ನೆ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿಯಾಗಿ ಕರಾವಳಿ ಲೇಖಕಿಯರ ಮತ್ತು ವಾಚಿಕಿಯರ ಸಂಘದ ಪ್ರಧಾನ ಕಾರ್ಯದರ್ಶಿ ಯಶೋದಾ ಮೋಹನ್ ಭಾಗವಹಿಸಿ ಮಾತನಾಡಿದರು. ತುಳು ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜಿನ ಹಿರಿಯ ಪ್ರಾಧ್ಯಾಪಕ ಚಂದ್ರನಾಥ ಎಂ.,ವಿದ್ಯಾರ್ಥಿ ಸಂಚಾಲಕಿ ಅಕ್ಷತಾ ಉಪಸ್ಥಿತರಿದ್ದರು. ಅಕಾಡಮಿಯ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.
*ಕಾಲೇಜಿನ ೩೦ ವಿದ್ಯಾರ್ಥಿಗಳು ಅಕಾಡಮಿಯ ಗ್ರಂಥಾಲಯದಲ್ಲಿ ತುಳು ಸಾಹಿತ್ಯ ಕೃತಿಗಳನ್ನು ಓದಿ ಸಂಜೆಯ ಸಮಾರೋಪ ಕಾರ್ಯಕ್ರಮದಲ್ಲಿ ಅಭಿಪ್ರಾಯ ಹಂಚಿಕೊಂಡರು.







