'ಮೀಫ್'ನಿಂದ ವಿದ್ಯಾರ್ಥಿಗಳಿಗೆ ಬೆಂಗಳೂರು ಶೈಕ್ಷಣಿಕ ಅಧ್ಯಯನ ಪ್ರವಾಸ

ಬೆಂಗಳೂರು: ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆ ಗಳ ಒಕ್ಕೂಟ (ಮೀಫ್)ದಿಂದ ವಾರ್ಷಿಕ ಅಧ್ಯಯನ ಕ್ರಿಯಾ ಯೋಜನೆ ಕಾರ್ಯಕ್ರಮಗಳ ಅಂಗವಾಗಿ ನೋಬಲ್ ಸ್ಕೂಲ್ ಕುಂಜತ್ತಬೈಲ್, ಮನ್ಶರ್ ಅಕಾಡೆಮಿ ಬೆಳ್ತಂಗಡಿ, ಪೀಸ್ ಸ್ಕೂಲ್ ಕಲ್ಲಾಪು, ಇಸ್ಲಾಹಿ ಸ್ಕೂಲ್ ಉಳ್ಳಾಲ, ಚೈತನ್ಯ ಸ್ಕೂಲ್ ಕೃಷ್ಣಾಪುರ ಶಾಲೆಗಳ 69 ವಿದ್ಯಾರ್ಥಿಗಳು ಸೋಮವಾರ ಬೆಂಗಳೂರು ಅಧ್ಯಯನ ಪ್ರವಾಸ ಕೈಗೊಂಡರು.
ಬೆಂಗಳೂರಿನ ಬ್ಯಾರಿ ಸೌಹಾರ್ದ ಭವನವನ್ನು ಸಂದರ್ಶಿಸಿ ಅಲ್ಲಿರುವ ವಿವಿಧ ವಿಭಾಗಗಳನ್ನು ನೋಡಿದ ಬಳಿಕ ಇಸ್ರೋ ಬಾಹ್ಯಾಕಾಶ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮ್ಯೂಸಿಯಂ, ಚಂದ್ರಯಾನದ ಪ್ರಾತ್ಯಕ್ಷಿಕೆ ಹಾಗೂ ಉಪಗ್ರಹ ತಯಾರಿಸುವ ಪ್ರಯೋಗ ಶಾಲೆಯನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ನಂತರ ವಿಧಾನಸಭಾದ್ಯಕ್ಷ ಯು.ಟಿ ಖಾದರ್ ಅವರ ವಿಶೇಷ ಅನುಮತಿ ಪಡೆದು ವಿಧಾನಮಂಡಲ ಅಧಿವೇಶನವನ್ನು ಗ್ಯಾಲರಿಯಿಂದ ವಿದ್ಯಾರ್ಥಿಗಳು ವೀಕ್ಷಿಸಿದರು.
ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಟ್ಯಾಲೆಂಟ್, ಉಪಾಧ್ಯಕ್ಷ ಮುಸ್ತಫಾ ಸುಳ್ಯ, ಕಾರ್ಯಕ್ರಮ ಯೋಜನಾ ಕಾರ್ಯನಿರ್ವಾಹಕ ಶಾರೀಕ್ ಕುಂಜತ್ತಬೈಲ್, ಕಾರ್ಯಕ್ರಮ ಸಂಚಾಲಕ ಇಕ್ಬಾಲ್, ಕಾರ್ಯಕಾರಿಣಿ ಸದಸ್ಯರಾದ ಅಬ್ದುಲ್ ರಝಾಕ್ , ಹೈದರ್ ಉಪಸ್ಥಿತರಿದ್ದರು.







