ಬ್ಯಾಂಕ್ ಆಫ್ ಬರೋಡಾಗೆ ಐದು ಪ್ರಶಸ್ತಿ

ಮಂಗಳೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲೊಂದಾದ ಬ್ಯಾಂಕ್ ಆಫ್ ಬರೋಡಾವು ಭಾರತೀಯ ಬ್ಯಾಂಕ್‌ಗಳ ಆಯೋಜಿಸಿದ ಪ್ರತಿಷ್ಠಿತ 21ನೇ ವಾರ್ಷಿಕ ಬ್ಯಾಂಕಿಂಗ್ ತಂತ್ರಜ್ಞಾನ ಪ್ರಶಸ್ತಿಗಳು 2024-25ರಲ್ಲಿ ತಂತ್ರಜ್ಞಾನ ಹಾಗೂ ನಾವೀನ್ಯತೆಯಲ್ಲಿನ ನಾಯಕತ್ವಕ್ಕಾಗಿ ಲಾರ್ಜ್ ಬ್ಯಾಂಕ್‌ಗಳ ವಿಭಾಗದಲ್ಲಿ ಐದು ಪ್ರಶಸ್ತಿ ವಿಭಾಗಗಳನ್ನು ಬಾಚಿಕೊಂಡಿದೆ.
ಅತ್ಯುತ್ತಮ ಎಐ ಮತ್ತು ಎಂಎಲ್ ಅಳವಡಿಕೆ, ಅತ್ಯುತ್ತಮ ಫಿನ್‌ಟೆಕ್ ಹಾಗೂ ಡಿಪಿಐ ಅಳವಡಿಕೆ, ಅತ್ಯುತ್ತಮ ಐಟಿ ಅಪಾಯ ನಿರ್ವಹಣೆ ಮತ್ತು ಅತ್ಯುತ್ತಮ ತಂತ್ರಜ್ಞಾನ ಪ್ರತಿಭೆ. ಇದಲ್ಲದೆ, ಅತ್ಯುತ್ತಮ ತಂತ್ರಜ್ಞಾನ ಬ್ಯಾಂಕ್ ವಿಭಾಗದಲ್ಲಿ ಬ್ಯಾಂಕ್‌ಗೆ ವಿಶೇಷ ಪ್ರಶಸ್ತಿ ಲಭಿಸಿದೆ.
ಈ ಸಾಧನೆ ಕುರಿತು ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ. ದೇಬದತ್ತ ಚಂದ್ ಅವರು, ‘‘ಐಬಿಎ ಪ್ರಶಸ್ತಿಗಳನ್ನು ಸ್ವೀಕರಿಸುವುದು ಬ್ಯಾಂಕ್ ಆಫ್ ಬರೋಡಾಗೆ ಅಪಾರ ಗೌರವದ ವಿಚಾರವಗಿದೆ. ಇವು ನಾವೀನ್ಯತೆ, ಬಲಿಷ್ಠ ಅಪಾಯ ನಿರ್ವಹಣೆ ಹಾಗೂ ದೃಢವಾದ ತಂತ್ರಜ್ಞಾನ ತಂಡ ನಿರ್ಮಾಣದ ಮೇಲೆ ನಮ್ಮ ನಿರಂತರ ಗಮನವನ್ನು ನೀಡುತ್ತಿದ್ದೆವೆ. ಎಂದು ಹೇಳಿದರು.
ಈ ಗೌರವಗಳು ತಂತ್ರಜ್ಞಾನ ಆಧಾರಿತ ನಾವೀನ್ಯತೆ ಮತ್ತು ಗ್ರಾಹಕ ಕೇಂದ್ರಿತ ಬ್ಯಾಂಕಿಂಗ್ ಮೇಲಿನ ಬ್ಯಾಂಕ್ ಆಫ್ ಬರೋಡಾದ ದೃಢ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.







