ಬಂಟ್ವಾಳ | ಅಝಾದ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಯುವ ನ್ಯಾಯವಾದಿಗಳಿಗೆ ಸನ್ಮಾನ

ಬಂಟ್ವಾಳ, ನ.23: ಪಾಣೆಮಂಗಳೂರಿನ ನೆಹರೂ ನಗರದ ಅಝಾದ್ ಫ್ರೆಂಡ್ಸ್ ಸರ್ಕಲ್ (ರಿ) ವತಿಯಿಂದ ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿಗೊಳಪಟ್ಟ ಪಿತ್ತಿಲಗುಡ್ಡೆಯ ಇಜಾಝ್ ಅಹ್ಮದ್, ಅಕ್ಕರಂಗಡಿಯ ಸೌದತ್ ಬಾನು, ನೆಹರೂ ನಗರದ ಮುಹಮ್ಮದ್ ನಿಹಾಲ್ ಅವರನ್ನು ಸಂಸ್ಥೆಯ ಕಚೇರಿ ವಠಾರದಲ್ಲಿ ಸನ್ಮಾನಿಸಲಾಯಿತು.
ಉದ್ಯಮಿ ಪಿ.ಎಸ್. ಅಬ್ದುಲ್ ಹಮೀದ್, ಅಕ್ಕರಂಗಡಿ ಮಸೀದಿ ಅಧ್ಯಕ್ಷ ಜೆಟಿಟಿ ಗಫೂರ್, ಸುಲೈಮಾನ್ ನೆಹರೂ ನಗರ, ಗ್ರಾಪಂ ಸದಸ್ಯರಾದ ರಿಯಾಝ್, ಝುಬೈದಾ, ಮುಮ್ತಾಝ್ ಹಾಗೂ ಅಝಾದ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಎನ್. ಬಶೀರ್ ನಾಗರೀಕರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಬ್ದುಲ್ ಖಾದರ್ ಪಿ.ಜೆ. ವಂದಿಸಿದರು.
Next Story







