ಬಂಟ್ವಾಳ: ದ.ಕ ಜಿಲ್ಲಾ ವಖ್ಫ್ ಕಾರ್ಯಾಲಯದ ವತಿಯಿಂದ ವಖ್ಫ್ ಮಾಹಿತಿ ಕಾರ್ಯಗಾರ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಕಾರ್ಯಾಲಯದ ವತಿಯಿಂದ ಹಾಗೂ ವಖ್ಫ್ -ಮೈನಾರಿಟಿ ಇನ್ಫೋ ಇದರ ಸಹಯೋಗದೊಂದಿಗೆ ಬಂಟ್ವಾಳ ತಾಲೂಕಿಗೊಳಪಟ್ಟ ಮೊಹಲ್ಲಾಗಳ ನಾಯಕರುಗಳಿಗೆ ಉಮ್ಮೀದ್ ಪೋರ್ಟಲ್ ಬಗ್ಗೆ ಮಾಹಿತಿ ಕಾರ್ಯಗಾರ ಮುಹಿಯುದ್ದೀ ನ್ ಸಮುದಾಯ ಭವನ ಮಿತ್ತಬೈಲ್ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದ.ಕ ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಉಮ್ಮೀದ್ ಪೋರ್ಟಲ್ ನಲ್ಲಿ ವಖ್ಫ್ ಆಸ್ತಿಗಳ ಮಾಹಿತಿಯನ್ನು ನಮೂದಿಸುವ ಅಗತ್ಯತೆಗಳ ಬಗ್ಗೆ ವಿವರಿಸಿದರು. ವಖ್ಫ್ ಕಾರ್ಯಾಲಯದ ಆಡಿಟರ್ ಅನ್ವರ್ ಮುಸ್ತಫ ಅವರು, ಉಮ್ಮೀದ್ ಪೋರ್ಟಲ್ ನಲ್ಲಿ ವಖ್ಫ್ ಆಸ್ತಿಗಳ ಮಾಹಿತಿ ತುಂಬುವುದರ ಬಗ್ಗೆ ವಿವರವಾಗಿ ವಿವರಿಸಿದರು.
ಮಿತ್ತಬೈಲ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಅದ್ದೇಡಿ ಸ್ವಾಗತಿಸಿದರು. ಮಾದಕ ದ್ರವ್ಯದ ವಿರೋಧಿ ಆಂದೋಲನದ ರೂವಾರಿ ಶೇಕ್ ಮುಹಮ್ಮದ್ ಇರ್ಫಾನಿ ಉಸ್ತಾದ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಮಿತ್ತಬೈಲ್ ಮಸೀದಿ ಅಧ್ಯಕ್ಷ ಮೊಹಮ್ಮದ್ ಸಾಗರ್, ಹಂಗಾಮಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಉಪಸ್ಥಿತರಿದ್ದರು.
ವಖ್ಫ್-ಮೈನಾರಿಟಿ ಇನ್ಫೋ ಇದರ ಅಡ್ಮಿನ್ ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿದರು.
ಉಮ್ಮೀದ್ ಪೋರ್ಟಲ್ ಮಾಹಿತಿ ತುಂಬುವ ಬಗ್ಗೆ ಆನ್ಲೈನ್ ಡೆಮೋ ತೋರಿಸಲಾಯಿತು. ತಾಲೂಕಿನ ಹಲವು ಮಸೀದಿ, ಮೊಹಲ್ಲಾದ ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.
ವಖ್ಫ್ ಇಲಾಖೆ ಹಾಗೂ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಂಟ್ವಾಳ ತಾಲೂಕಿನ ಎಲ್ಲಾ ಮೊಹಲ್ಲಾಗಳ ವಖ್ಫ್ ವಿವರಗಳನ್ನು ಉಮ್ಮೀದ್ ಪೋರ್ಟಲ್ ನಲ್ಲಿ ಸಲ್ಲಿಸಲು ಮಿತ್ತಬೈಲ್ ಮುಹಿಯುದೀನ್ ಸಭಾಭವನದಲ್ಲಿ ಹೆಲ್ಪ್ ಡೆಸ್ಕ್ ತೆರೆದು ಸಹಕರಿಸಲು ತೀರ್ಮಾನಿಸಲಾಯಿತು.
ಈ ಕುರಿತಂತೆ ಸ್ಥಳೀಯವಾಗಿ ಸೈಬರ್ ಸೆಂಟರ್ ನಡೆಸುತ್ತಿರುವ ಪ್ರಮುಖ ಕಂಪ್ಯೂಟರ್ ಆಪರೇಟರ್‌ಗಳಿಗೆ ಮತ್ತು ಮೊಹಲ್ಲಾಗಳಲ್ಲಿ ಕಂಪ್ಯೂಟರ್ ಜ್ಞಾನ ತಿಳಿದಿರುವ ಯುವಕರಿಗೆ ತರಬೇತಿ ನೀಡಲು ತೀರ್ಮಾನಿಸಲಾಯಿತು.







