ವಾಯುಭಾರ ಕುಸಿತ : ಕರಾವಳಿ, ಮಲೆನಾಡು ಜಿಲ್ಲೆಗೆ ರೆಡ್ ಅಲರ್ಟ್

ಮಂಗಳೂರು ಆ.17 : ಕರಾವಳಿಯ ದಕ್ಷಿಣ ಕನ್ನಡ , ಉಡುಪಿ , ಉತ್ತರ ಕನ್ನಡ ಮತ್ತು ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ರೆಡ್ ಆಲರ್ಟ್ ಘೋಷಿಸಿದ್ದು, ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸೂಚನೆ ನೀಡಿದೆ.
ಆ.17 - 18ರಂದು ಶಿವಮೊಗ್ಗ ಮತ್ತು ಚಿಕ್ಕಮಗಳೂರು, ಕೊಡಗು ಜಿಲ್ಲೆಗೆ ರೆಡ್ ಅಲರ್ಟ್, ಆ.19 ಹಾಗೂ 20 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬಂಗಾಳ ಉಪಸಾಗರದ ಆಂಧ್ರಪ್ರದೇಶ ಹಾಗೂ ಒಡಿಸ್ಸಾದ ಕರಾವಳಿ ಹತ್ತಿರ ವಾಯುಭಾರ ಕುಸಿತ ಆಗಿದೆ. ಇದರ ಪರಿಣಾಮವಾಗಿ ಕರಾವಳಿ, ಹಾಗೂ ಮಲೆನಾಡಿನ ಎಲ್ಲ ಜಿಲ್ಲೆಗಳಲ್ಲಿ ಆ.17ರಿಂದ ಆ.20 ರವರೆಗೆ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದ.ಕ. ಜಿಲ್ಲೆಯ ಮಳೆಯ ವಿವರ:
ದ.ಕ. ಜಿಲ್ಲೆಯಲ್ಲಿ ರವಿವಾರ ಸಾಧಾರಣ ಮಳೆಯಾಗಿದ್ದು, ಬೆಳಗ್ಗೆ 8:30ರ ತನಕ ದ.ಕ. ಜಿಲ್ಲೆಯಲ್ಲಿ ಸುರಿದ ಮಳೆಯ ವಿವರ ಇಂತಿವೆ.
ದಕ್ಷಿಣ ಕನ್ನಡ 46 ಮಿ.ಮೀ, ಬೆಳ್ತಂಗಡಿ 60.4 ಮಿ.ಮೀ, ಬಂಟ್ವಾಳ 39.5 ಮಿ.ಮೀ, ಮಂಗಳೂರು 23.1 ಮಿ.ಮೀ, ಪುತ್ತೂರು 28.9 ಮಿ.ಮೀ, ಸುಳ್ಯ 43.4 ಮೀ, ಮೂಡಬಿದ್ರೆ 27.8 ಮಿ.ಮೀ, ಕಡಬ 65.5 ಮಿ.ಮೀ, ಮುಲ್ಕಿ 21.4 ಮಿ.ಮೀ, ಉಳ್ಳಾಲ 18.4 ಮೀ.ಮಿ.
ಕಳೆದ ಜನವರಿ 1ರಿಂದ ಆ.17ರ ತನಕ ದ.ಕ. ಜಿಲ್ಲೆಯಲ್ಲಿ ಸರಾಸರಿ 3, 687 ಮಿ.ಮೀ ಮಳೆಯಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 2,978 ಮಿ.ಮೀ ಮಳೆಯಾಗಿತ್ತು.2024 ಆ.17ರಂದು ದ.ಕ. ಜಿಲ್ಲೆಯಲ್ಲಿ ಸರಾಸರಿ 36 ಮಿ.ಮೀ ಮಳೆಯಾಗಿತ್ತು







