ಬಿ.ಸಿ.ರೋಡ್: ಡೈಮಂಡ್ ಸ್ಕೂಲ್ ವಿದ್ಯಾರ್ಥಿಗಳಿಂದ ಪೊಲೀಸ್ ಹುತಾತ್ಮ ದಿನಾಚರಣೆ

ಮಂಗಳೂರು: ಬಿ.ಸಿ.ರೋಡ್‌ನ ಡೈಮಂಡ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳು ಪೊಲೀಸ್ ಹುತಾತ್ಮ ದಿನದ ಪ್ರಯುಕ್ತ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಹುತಾತ್ಮ ಪೊಲೀಸರ ಪ್ರತಿಮೆಗಳಿಗೆ ಪುಷ್ಪಾಚರಣೆ ಹಾಗೂ ಅಧಿಕಾರಿಗಳೊಂದಿಗೆ ಸಂವಾದ ಮಾಡುವ ಮೂಲಕ ಆಚರಿಸಿದರು.
ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಭೇಟಿಯಾದ ವಿದ್ಯಾರ್ಥಿಗಳು ಅನೇಕ ವಿಷಯಗಳ ಬಗ್ಗೆ ಮಾಹಿತಿ ಪಡೆದು, ತಮ್ಮ ಶಾಲೆಯ ಚಟುವಟಿಕೆ ಹಾಗೂ ಪರಿಚಯವನ್ನು ಮಾಡಿದರು. ಶಾಲಾ ಪ್ರಾಂಶುಪಾಲರಾದ ಗಿರೀಶ್ ಕಾಮತ್ ಹಾಗೂ ಉಪ ಪ್ರಾಂಶುಪಾಲರಾದ ಅನಿಲ್ ನಾಯ್ಕ್ ಆಯುಕ್ತರಿಗೆ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು.
ಡಿಸಿಪಿ ಮಿಥುನ್ ಎಚ್.ಎನ್., ಎಸಿಪಿ ಗೀತಾ ಕುಲಕರ್ಣಿ ಅವರನ್ನು ಭೇಟಿ ಮಾಡಿದ ವಿದ್ಯಾರ್ಥಿಗಳಿಗೆ ಪೊಲೀಸ್ ಕಂಟ್ರೋಲ್ ಕೊಠಡಿ, ಸೈಬರ್ ಕ್ರೈಂ ಕೊಠಡಿ, ಟ್ರಾಫಿಕ್ ಮ್ಯಾನೇಜ್‌ಮೆಂಟ್ ಕಚೇರಿ, ಕ್ರೈಂ ರೆಕಾರ್ಡ್ ಕೊಠಡಿಗಳನ್ನು ತೋರಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಅನೇಕ ಹಿತವಚನಗಳನ್ನು ನೀಡಿ ಅಭಿನಂದಿಸಿದರು.
ವಿದ್ಯಾರ್ಥಿಗಳು ಪೊಲೀಸ್ ಹುತಾತ್ಮರ ದಿನದ ಬಗ್ಗೆ ಭಾಷಣ ಹಾಗೂ ಹಾಡುಗಳನ್ನು ಹಾಡಿ ಹುತಾತ್ಮ ಪೊಲೀಸರಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಉನೈದಾ, ಸಫಾ ಆಯನಾ, ಶದೀದಾ, ಅಸಿಫಿಯಾ ಹಾಗು ಇತರರು ಉಪಸ್ಥಿತರಿದ್ದರು.







