ಫೆ.26: ‘ಬ್ಯಾರಿ ಬ್ಯುಸಿನೆಸ್ ಡೈರೆಕ್ಟರಿ’ ಲೋಕಾರ್ಪಣೆ

ಮಂಗಳೂರು: 9 ತಿಂಗಳ ಹಿಂದೆ ಆರಂಭಗೊಂಡು ಕಾರ್ಯನಿರ್ವಹಿಸುತ್ತಿರುವ 'ಬ್ಯಾರಿಇನ್ಫೋ ಡಾಟ್ ಕಾಂ' ( www.bearyinfo.com ) ವೆಬ್‌ಸೈಟ್‌ನ ಹೊಸ ವಿಭಾಗ ‘ಬ್ಯಾರಿ ಬ್ಯುಸಿನೆಸ್ ಡೈರೆಕ್ಟರಿ’ ಸಿದ್ಧವಾಗಿದ್ದು ಫೆಬ್ರವರಿ 26ರಂದು ಲೋಕಾರ್ಪಣೆಗೊಳ್ಳಲಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಬ್ಯಾರಿ ಸೆಂಟ್ರಲ್ ಕಮಿಟಿಯವರು ಹಮ್ಮಿಕೊಂಡಿರುವ ಒಂದು ದಿನದ ‘ಬ್ಯಾರಿ ಕೂಟ’ ಕಾರ್ಯಕ್ರಮದಲ್ಲಿ ಬೆಳಗ್ಗೆ 11 ಗಂಟೆಯಿಂದ ನಡೆಯಲಿರುವ ಬ್ಯಾರಿ ಬ್ಯುಸಿನೆಸ್ ಸೆಮಿನಾರ್‌ನಲ್ಲಿ ‘ಬ್ಯಾರಿ ಬ್ಯುಸಿನೆಸ್ ಡೈರೆಕ್ಟರಿ’ ಅನಾವರಣಗೊಳ್ಳಲಿದೆ.
ವೆಬ್‌ಸೈಟ್‌ನ ಈ ವಿಭಾಗದಲ್ಲಿ ಜಗತ್ತಿನಾದ್ಯಂತ ಇರುವ ಸಣ್ಣ, ದೊಡ್ಡ ಬ್ಯಾರಿ ಉದ್ಯಮಿಗಳು, ವ್ಯಾಪಾರಿಗಳು, ವೃತ್ತಿಪರರು ತಮ್ಮನ್ನು ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ವ್ಯಾಪಾರ, ಉದ್ಯಮ ಮತ್ತು ವೃತ್ತಿಪರ ಬ್ಯಾರಿಗಳನ್ನು ಪರಸ್ಪರ ಪರಿಚಯಿಸುವ, ಒಂದುಗೂಡಿಸುವ ಕೊಂಡಿಯಾಗಿ ಈ ವೆಬ್‌ಸೈಟ್ ಕಾರ್ಯನಿರ್ವಹಿಸಲಿದ್ದು, ಎಲ್ಲ ಬ್ಯಾರಿಗಳು ಇದರ ಪ್ರಯೋಜನ ಪಡೆಯಬೇಕೆಂದು ವೆಬ್‌ಸೈಟ್‌ನ ಸ್ಥಾಪಕರಾದ ಮುಹಮ್ಮದ್ ಅಲಿ ಕಮ್ಮರಡಿ ಮತ್ತು ಮುಹಮ್ಮದ್ ಕುಳಾಯಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





