ಬ್ಯಾರಿ ಯುವ ಜನ ಪರಿಷತ್ ಶೀಘ್ರದಲ್ಲೇ ಅಸ್ತಿತ್ವಕ್ಕೆ: ಖಾಲಿದ್ ಉಜಿರೆ
ಮಂಗಳೂರು: ಬ್ಯಾರಿ ಸಮುದಾಯದ ಯುವಜನತೆ ಬ್ಯಾರಿ ಭಾಷೆ , ಸಂಸ್ಕೃತಿ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ವ್ಯಕ್ತಿತ್ವ ವಿಕಸನ ,ಕ್ರಿಯಾಶೀಲ ನಾಯಕತ್ವ ,ಸಮಾಜಸೇವೆ ಯನ್ನು ಮೈಗೂಡಿಸಿ ಕೊಂಡು ಆರೋಗ್ಯವಂತ ಬ್ಯಾರಿ ಸಮುದಾಯ ನಿರ್ಮಾಣ ಕಾರ್ಯಗಳಿಗೆ ಕೊಡುಗೆ ನೀಡುವಂತಾಗಬೇಕು ಎಂಬ ನಿಟ್ಟಿನಲ್ಲಿ ನೂತನ ಬ್ಯಾರಿ ಯುವಜನ ಪರಿಷತ್ತನ್ನು ರಚಿಸಲಾಗುವುದು ಎಂದು ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಕೇಂದ್ರೀಯ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಯು. ಎಚ್.ಖಾಲಿದ್ ಉಜಿರೆ ಅವರು ತಿಳಿಸಿದ್ದಾರೆ.
ಈಗಾಗಲೇ ಬ್ಯಾರಿ ಪರಿಷತ್ ಎರಡು ದಶಕಗಳನ್ನು ಪೂರೈಸುತ್ತಿರುವ ಸುಸಂದರ್ಭದಲ್ಲಿ ಈ ವರ್ಷಾರಂಭದಲ್ಲಿ ಸ್ಥಾಪಿಸಲಾಗಿರುವ ಬ್ಯಾರಿ ಮಹಿಳಾ ಘಟಕವು ಯಶಸ್ವಿ ಯಾಗಿ ಕಾರ್ಯಾಚರಿಸುತ್ತಿದ್ದು ಅದೇ ರೀತಿಯಲ್ಲಿ ಯುವಜನ ಪರಿಷತ್ತು ಒಂದನ್ನು ರಚಿಸಲೂ ಕೂಡ ಯೋಜನೆ ರೂಪಿಸಿದೆ.
ಈ ನೂತನ ಪರಿಷತ್ತಿಗೆ ಸೇರಲಿಚಿಸುವ ಯುವಕರು (18 ರಿಂದ 35 ವರ್ಷ ವಯಸ್ಸಿನವರು) ತಮ್ಮ ಹೆಸರನ್ನು ಕೇಂದ್ರೀಯ ಪರಿಷತ್ತಿನ ಗೌರವಾಧ್ಯಕ್ಷ ಯೂಸುಫ್ ವಕ್ತಾರ್ (9008503993 ) ಅಥವಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು (9448620793) ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರನ್ನು ಇದೇ ಸಪ್ಟೆಂಬರ್ ತಿಂಗಳ 10ನೇ ತಾರೀಕಿನ ಮುಂಚಿತವಾಗಿ ನೋಂದಾಯಿಸಬೇಕಾಗಿ ವಿನಂತಿಸಿದ್ದು ತದನಂತರ ಮಹಾಸಭೆಯೊಂದನ್ನು ಕರೆದು ನೂತನ ಸಮಿತಿ ರಚನೆ ಮಾಡಿ ಬ್ಯಾರಿ ಯುವ ಸಮಾವೇಶವನ್ನು ಏರ್ಪಡಿಸಲಾಗು ವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







