ಬೆಳ್ತಂಗಡಿ | ವಿಷದ ಹಾವು ಕಡಿತ: ಮಹಿಳೆ ಮೃತ್ಯು

ಸಾಂದರ್ಭಿಕ ಚಿತ್ರ
ಬೆಳ್ತಂಗಡಿ : ತಾಲೂಕಿನ ಶಿಶಿಲ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಡಿ.21ರಂದು ನಡೆದಿದೆ.
ಶಿಶಿಲ ಗ್ರಾಮದ ಗುಡ್ಡೆ ತೋಟ ನಿವಾಸಿ ಪ್ರೇಮ (55) ಮೃತ ಮಹಿಳೆಯಾಗಿದ್ದಾರೆ. ಮದ್ಯಾಹ್ನದ ವೇಳೆ ತೋಟದಲ್ಲಿ ಕೆಲಸ ನಿರತವಾಗಿದ್ದಾಗ ನಾಗರ ಹಾವು ಕಡಿದಿದೆ ಎಂದು ಹೇಳಲಾಗಿದೆ.
ಹಾವು ಕಡಿದ ಕೂಡಲೇ ಶೌರ್ಯ ವಿಪತ್ತು ತಂಡದ ಸದಸ್ಯರ ಸಹಾಯದೊಂದಿಗೆ ಪ್ರೇಮ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವಿಷದ ತೀವ್ರ ಪರಿಣಾಮದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ.
Next Story





