ಬೆಳ್ತಂಗಡಿ| ʼಸಂದ್ಯಾ ವಾಯ್ಸ್ ಫಾರ್ ಜಸ್ಟಿಸ್ʼ ಫೇಸ್‌ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಸಂದ್ಯಾ ಎಂಬ ಹೆಸರಿನಲ್ಲಿ ʼಸಂದ್ಯಾ ವಾಯ್ಸ್ ಫಾರ್ ಜಸ್ಟಿಸ್ʼ ಎಂಬ ಫೇಸ್‌ಬುಕ್ ಪೇಜ್ ನಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವಂತೆ ಅಶ್ಲೀಲವಾಗಿ ಮಾತನಾಡಿದ ಬಗ್ಗೆ ʼಸಂದ್ಯಾ ವಾಯ್ಸ್ ಫಾರ್ ಜಸ್ಟಿಸ್ʼ ಫೇಸ್‌ಬುಕ್ ಪೇಜ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ದಯಾನಂದ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ʼಸಂದ್ಯಾ ವಾಯ್ಸ್ ಫಾರ್ ಜಸ್ಟಿಸ್ʼ ಫೇಸ್‌ಬುಕ್ ಪೇಜ್ ವಿರುದ್ಧ ಕಲಂ 296 ಬಿಎನ್.ಎಸ್ ನಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





