ಬೆಳ್ತಂಗಡಿ | ಮಿಲಾದುನ್ನಭಿ ಪ್ರಯುಕ್ತ ಖಿಲರ್ ಜುಮ್ಮಾ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ

ಬೆಳ್ತಂಗಡಿ : ಖಿಲರ್ ಜುಮ್ಮಾ ಮಸೀದಿ ಮತ್ತು ಖಿಲರಿಯಾ ಸ್ವಲಾತ್ ಕಮಿಟಿ ಇದರ ಜಂಟಿ ಆಶ್ರಯದಲ್ಲಿ ಮಿಲಾದುನ್ನಭಿ ಪ್ರಯುಕ್ತ 3 ದಿನಗಳ ಧಾರ್ಮಿಕ ಕಾರ್ಯಕ್ರಮ ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿಯಲ್ಲಿ ಜಮಾಅತ್ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ಬುಧವಾರ ರಾತ್ರಿ ನಡೆದ ಮದರಸ ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ತ್ವಾಹ ಜಿಫ್ರಿ ತಂಗಳ್ ಅವರ ದುವಾಶೀರ್ವಾದದೊಂದಿಗೆ ಮಸೀದಿ ಖತೀಬಾರದ ಹನೀಫ್ ಫೈಝಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮದರಸ ಪ್ರಾಧ್ಯಾಪಕರು, ಜಮಾತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗುರುವಾರ ರಾತ್ರಿ ಸಮಾರೋಪ ಸಮಾರಂಭ ಕಾರ್ಯಕ್ರಮ, SSLC ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಮದರಸ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು.ಅತಿಥಿಯಾಗಿ ಆಗಮಿಸಿದ್ದ ಡ್ರಿಮ್ ಡೀಲ್ ಮಾಲಕರಾದ ಮುಹಮ್ಮದ್ ಸುಹೈಲ್ ಅವರನ್ನು ಸನ್ಮಾನಿಸಲಾಯಿತು. ಖಿಲರ್ ಜುಮ್ಮಾ ಮಸೀದಿ ಸೇವೆ ನೀಡುತ್ತಿರುವ ಉಸ್ತಾದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶುಕ್ರವಾರ ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಸ್ವಲಾತ್ ಕಮಿಟಿ ಅಧ್ಯಕ್ಷರಾದ ಹೈದರ್ ಬಿ.ಕೆ ಅವರು ನೆರವೇರಿಸಿದರು. ಗುರುವಾಯನಕೆರೆ ದರ್ಗಾ ಝೀಯಾರತ್ ನಂತರ ಮಸೀದಿಯಲ್ಲಿ ಮೌಲಿದ್ ಪಾರಾಯಣ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿ ಇದರ ಪದಾಧಿಕಾರಿಗಳು, ಖಿಲರಿಯಾ ಸ್ವಲಾತ್ ಕಮಿಟಿ ಪದಾಧಿಕಾರಿಗಳು, ಮಸೀದಿ ಉಸ್ತಾದರು, ಜಮಾತ್ ಬಾಂಧವರು, ಮಕ್ಕಳು, ಪೋಷಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ನಝೀರ್ ಬಿ.ಎ., ಮುಹಮ್ಮದ್ ಕೊಡಿ ಸಭೆ, ಬಿ.ಶೇಕುಂಞ್ಞ, ಶರೀಫ್ ಮಟ್ಲ, ರಝಕ್ ಕೊಡಿಸಭೆ, ಹೈದರ್ ಬಿ.ಕೆ., ಫೈಝಲ್ ಐ ಜೆ, ಇಸ್ಮಾಲಿ ಐ ಬಿ, ಹಾರಿಸ್ ಐ ಜೆ, ಅಬುಸಾಲಿ, ಎನ್ ಎಸ್ ಅಬ್ದುಲ್ ರಹಿಮಾನ್, ಖಾದರ್ ಕುದ್ರಡ್ಕ, ಮೊಯಿದಿನ್ ಬಿ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.







