ಬೆಳ್ತಂಗಡಿ: ಸದ್ಭಾವನಾ ಮಂಚ್ ಅಸ್ತಿತ್ವಕ್ಕೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಸದ್ಭಾವನಾ ಮಂಚ್ ಗೆ ಚಾಲನೆ ನೀಡಲಾಯಿತು.
ಅಳದಂಗಡಿಯ ಸೈಂಟ್ ಪೀಟರ್ ಕ್ಲಾವರ್ ಕೆಥೊಲಿಕ್ ಚರ್ಚ್ ಹಾಲ್ ನಲ್ಲಿ ನಡೆದ ವಿವಿಧ ಧರ್ಮಗಳ ಸಮಾನ ಮನಸ್ಕ ಹಿರಿಯರ ಸಭೆಯಲ್ಲಿ ಸದ್ಭಾವನಾ ಮಂಚ್ ಅಸ್ತಿತ್ವಕ್ಕೆ ನಿರ್ಧರಿಸಲಾಯಿತು.
ಎಲ್ಲ ಧರ್ಮಗಳ ಪ್ರಮುಖ ಹಬ್ಬಗಳ ಸಂದರ್ಭಗಳಲ್ಲಿ ಒಟ್ಟು ಸೇರಿ ಹಬ್ಬದ ಸಂತೋಷವನ್ನು ಪರಸ್ಪರ ಹಂಚಿಕೊಳ್ಳುವುದು, ರಾಷ್ಟ್ರೀಯ ದಿನಾಚರಣೆಗಳನ್ನು ಒಂದಾಗಿ ಆಚರಿಸುವುದು ಮುಂತಾದ ನಿರ್ಮಾಣಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇಂತಹ ವೇದಿಕೆಗಳನ್ನು ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಸ್ಥಾಪಿಸಲು ಪ್ರಯತ್ನಿಸುವುದು ಎಂದು ತೀರ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳ ವಿವರ
ಗೌರವಾಧ್ಯಕ್ಷ : ಫಾ.ಇಲಿಯಾಸ್ ಡಿಸೋಜ
2) ಅಧ್ಯಕ್ಷ : ಸುಭಾಸ್ ರೈ
3) ಪ್ರಧಾನ ಕಾರ್ಯದರ್ಶಿ: ಆದಂ ಶಾಫಿ
3) ಖಜಾಂಚಿ : ವಿಕ್ಟರ್ ಕ್ರಾಸ್ತಾ
4) ಉಪಾಧ್ಯಕ್ಷರು : ಮಬ್ಯಾಝ್, ಸುರೇಶ್ ಜೈನ್, ಲಿಯೋ ಪೆರೇರಾ ಮತ್ತು ನಾಸಿರ್ ಖಾನ್
Next Story





