ಬೆಳ್ತಂಗಡಿ| ಐದು ತಲೆ ಬುರುಡೆ ಸೇರಿ ಅಸ್ಥಿಪಂಜರಗಳ ಮಹಜರು ನಡೆಸಿದ ಎಸ್.ಐ.ಟಿ ತಂಡ

ಬೆಳ್ತಂಗಡಿ: ದಿನವಿಡೀ ನಡೆಸಿದ ಕಾರ್ಯಾಚರಣೆಯ ಬಳಿಕ ಎಸ್.ಐ.ಟಿ ತಂಡ ಮಹಜರು ಮಾಡಿದ ಸಾಕಷ್ಟು ಅವಶೇಷಗಳೊಂದಿಗೆ ಬಂಗ್ಲೆಗುಡ್ಡ ಅರಣ್ಯದಿಂದ ಹೊರ ಬಂದಿದ್ದಾರೆ.
ಸೀಲ್ ಮಾಡಿರುವ ಹಲವಾರು ಬಾಕ್ಸ್ ಗಳನ್ನು ಎಸ್.ಐ.ಟಿ ತಂಡ ಅರಣ್ಯದಿಂದ ಹೊರಕ್ಕೆ ತಂದಿದ್ದಾರೆ. ಎಸ್.ಐ.ಟಿ ಮೂಲಗಳಿಂದ ಲಭಿಸುವ ಮಾಹಿತಿಗಳ ಪ್ರಕಾರ ಒಟ್ಟು ಐದು ತಲೆ ಬುರುಡೆಗಳು ಸೇರಿದಂತೆ ಅಸ್ಥಿಪಂಜರಗಳ ಮಹಜರು ಕಾರ್ಯ ಇಂದು ಪೂರ್ಣಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ನಾಳೆಯೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಎಸ್.ಐ.ಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story







