ಜು.30: ಮಂಗಳೂರಿನಲ್ಲಿ ಭಾವೈಕ್ಯತಾ ಸಮ್ಮಿಲನ

ಸಾಂದರ್ಭಿಕ ಚಿತ್ರ
ಮಂಗಳೂರು,ಜು.28: ಕರ್ನಾಟಕ ಭಾವೈಕ್ಯತಾ ಪರಿಷತ್ ವತಿಯಿಂದ ಭಾವೈಕ್ಯತಾ ಸಮ್ಮಿಲನ, ಕವಿಗೋಷ್ಠಿ ಹಾಗೂ ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ಗೆ ಭಾವೈಕ್ಯತಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜು.30ರಂದು ನಗರದ ಕಂಕನಾಡಿಯ ಜೆಪ್ಪು ಮರಿಯಾ ಸಭಾಂಗಣದಲ್ಲಿ ಬೆಳಗ್ಗೆ 9:30 ರಿಂದ ಅಪರಾಹ್ನ 3ರವರೆಗೆ ನಡೆಯಲಿದೆ.
ಕರ್ನಾಟಕ ಭಾವೈಕ್ಯತಾ ಪರಿಷತ್ ಅಧ್ಯಕ್ಷ ಕೆ.ಎಂ.ಇಕ್ಬಾಲ್ ಬಾಳಿಲ ಅವರ ಅಧ್ಯಕ್ಷತೆಯಲ್ಲಿ ನಾಡಿನ ನೂರು ಕವಿಗಳ ಕವನ ವಾಚನ, ಚರ್ಚಾ ಗೋಷ್ಠಿ , ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಕಾರ್ಯಕ್ರಮ ಉದ್ಘಾಟಿಸಲಿದ್ದು, ಲೇಖಕ ಕೆ.ಎ. ಅಬ್ದುಲ್ ಅಝೀಝ್ ಪುಣಚ ಸಂದೇಶ ಭಾಷಣ ಮಾಡುವರು ಎಂದು ಪ್ರಕಟನೆ ತಿಳಿಸಿದೆ.
Next Story