ಉಳ್ಳಾಲ: ಬೈಕ್ ಸ್ಕಿಡ್ ಆಗಿ ಸವಾರ ಮೃತ್ಯು

ಉಳ್ಳಾಲ: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಸವಾರ ಮೃತಪಟ್ಟ ಘಟನೆ ರಾ.ಹೆ.66 ರ ಕೊಲ್ಯ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಸೋಮೇಶ್ವರ ಗ್ರಾಮದ ಪಿಲಾರು ಅಂಬಿಸಾದಿ ನಿವಾಸಿ ಮನೋಜ್ ಗಟ್ಟಿ(54) ಮೃತ ದುರ್ದೈವಿ.
ಇಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದ ಮನೋಜ್ ಶುಕ್ರವಾರ ರಾತ್ರಿ ಕೋಟೆಕಾರಿನ ಕೊಂಡಾಣ ಕ್ಷೇತ್ರದ ಕಡೆಯ ಬಂಡಿ ಉತ್ಸವಕ್ಕೆ ತನ್ನ ಬೈಕಲ್ಲಿ ತೆರಳಿದ್ದರು. ರಾತ್ರಿ ವೇಳೆ ವಾಪಸ್ ಆಗುತ್ತಿದ್ದಾಗ ಕೊಲ್ಯದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟ ಮನೋಜ್ ಅವರು ಗಂಭೀರ ಗಾಯಗೊಂಡಿದ್ದು ಅವರನ್ನು ಸ್ಥಳೀಯರು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತ ಮನೋಜ್ ತಾಯಿ, ಪತ್ನಿ, ಪುತ್ರ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
Next Story





