ಅ.19ರಂದು ಬಿಂದು ಜುವೆಲ್ಲರಿ ಮಂಗಳೂರು ಶಾಖೆ ಶುಭಾರಂಭ

ಮಂಗಳೂರು, ಅ.17: ‘ಜೀವಿತಾವಧಿಯ ಭರವಸೆ’ ಎಂಬ ಧ್ಯೇಯವಾಕ್ಯದೊಂದಿಗೆ ಕೇರಳ ಮತ್ತು ಕರ್ನಾಟದಲ್ಲಿ ಕಾರ್ಯಾಚರಿಸುತ್ತಿರುವ ಬಿಂದು ಜುವೆಲ್ಲರಿಯ ಮಂಗಳೂರು ಶಾಖೆ ಅ.19ರಂದು ಶುಭಾರಂಭಗೊಳ್ಳಲಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಾಲಕ ಅಭಿಲಾಷ್ ಕೆ.ವಿ., ಎಸ್ ಸಿಎಸ್ ಆಸ್ಪತ್ರೆ ಬಳಿ ಬಿಂದು ಜುವೆಲ್ಲರಿಯ ಕರ್ನಾಟಕದ 2ನೇ ಶಾಖೆ ಬೆಳಗ್ಗೆ 10:30ಕ್ಕೆ ಉದ್ಘಾಟನೆಯಾಗಲಿದೆ ಎಂದರು.
ಕೇರಳ ಹಾಗೂ ದ.ಕ. ಜಿಲ್ಲೆಯ ಸುಳ್ಯದಲ್ಲಿ ಈಗಾಗಲೇ ಮನೆ ಮಾತಾಗಿರುವ ಬಿಂದು ಜುವೆಲ್ಲರಿಯ ನೂತನ ಶಾಖೆಯಲ್ಲಿ ವಜ್ರ ಹಾಗೂ ಕಡಿಮೆ ತೂಕದ ಚಿನ್ನಾಭರಣಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.
ಜುವೆಲ್ಲರಿ ಕ್ಷೇತ್ರದಲ್ಲಿ ಕಳೆದ 40 ವರ್ಷಗಳ ಅನುಭವ ಹೊಂದಿರುವ ಸಂಸ್ಥೆಯು ಗ್ರಾಹಕರ ಜೊತೆ ದೀರ್ಘಾವಧಿಯ ಸಂಪರ್ಕವನ್ನು ಹೊಂದಿದೆ. 1982ರಲ್ಲಿ ಸಂಸ್ಥಾಪಕ ಕೆ.ವಿ.ಕುಂಞಿಕಣ್ಣನ್ ಅವರಿಂದ ಬಿಂದು ಚಿನ್ನಾಭರಣಗಳ ಈ ಪಯಣ ಆರಂಭಗೊಂಡಿತ್ತು. ಇದೀಗ ಕರ್ನಾಟಕ ಮತ್ತು ಕೇರಳದ ಗ್ರಾಹಕರಿಗೆ ಚಿನ್ನದ ಪರಿಶುದ್ಧತೆಯ ಬದ್ಧತೆಯೊಂದಿಗೆ ನವನವೀನ ವಿನ್ಯಾಸವನ್ನು ಒದಗಿಸುವ ಮೂಲಕ ಅವರ ವಿಶ್ವಾಸವನ್ನು ಗಳಿಸಿಕೊಂಡಿದೆ. ತಂದೆ ಆರಂಭಿಸಿದ ಈ ಚಿನ್ನಾಭರಣದ ಉದ್ದಿಮೆಯನ್ನು ಮಕ್ಕಳಾದ ತಾವು ಮುಂದುವರಿಸಿಕೊಂಡು ಹೋಗುತ್ತಿರುವುದಾಗಿ ಅವರು ಹೇಳಿದರು.
ತನ್ನ ಹೊಸ ಶಾಖೆಯಲ್ಲೂ ಬಿಂದು ಜುವೆಲ್ಲರಿಯಿಂದ ‘ಅಕ್ಷಯ ನಿಧಿ’ ಮತ್ತು ‘ಸ್ವರ್ಣ ಬಿಂದು’ ಮಾಸಿಕ ಉಳಿತಾಯ ಯೋಜನೆ ಮುಂದುವರಿಯಲಿದೆ. ಈ ಉಳಿತಾಯ ಯೋಜನೆ ಮೂಲಕ ಗ್ರಾಹಕರು ಬೋನಸ್ ಮತ್ತು ಇತರ ಲಾಭಗಳನ್ನು ಪಡೆಯಬಹುದು ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇನ್ನೋರ್ವ ಮಾಲಕ ಡಾ.ಅಜಿತೇಶ್ ಕೆ.ವಿ., ಹಿರಿಯ ವ್ಯವಸ್ಥಾಪಕ ಸುನೀಲ್ ರಾಜ್ ಶೆಟ್ಟಿ ಉಪಸ್ಥಿತರಿದ್ದರು.







