ಶೀಘ್ರದಲ್ಲೇ ಬರಪೀಡಿತ ಜಿಲ್ಲೆಗಳಿಗೆ BJP ತಂಡ ಭೇಟಿ: ನಳಿನ್ ಕುಮಾರ್ ಕಟೀಲ್

ಮಂಗಳೂರು, ಅ.28: ರಾಜ್ಯ ದಲ್ಲಿ ಬರ ಪರಿಸ್ಥಿತಿ ಅಧ್ಯಯನ ಮಾಡಲು ಬಿಜೆಪಿ 17 ತಂಡಗಳನ್ನು ರಚಿಸಿದೆ ಈ ತಂಡಗಳು ಶೀಘ್ರದಲ್ಲೇ ಬರ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ನೀಡಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼರಾಜ್ಯ ದಲ್ಲಿ ಬರದಿಂದಾಗಿ ಕಳೆದ ಐದು ತಿಂಗಳಲ್ಲಿ 250 ಕ್ಕೂ ಅಧಿಕ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರಪರಿಹಾರದ ಹಣ ಬಿಡುಗಡೆ ಮಾಡಲು ಕೇಂದ್ರದ ಅಧ್ಯಯನ ತಂಡ ರಾಜ್ಯ ಕ್ಕೆ ಆಗಮಿಸಿ ನಿಯಮಾವಳಿಗಳ ಪ್ರಕಾರ ನಷ್ಟ ದ ಅಂದಾಜು ಮಾಡಲಿದೆ.ಈ ಪ್ರಕ್ರಿಯೆ ನಡೆದ ಬಳಿಕ ಪರಿಹಾರ ಬಿಡುಗಡೆ ಯಾಗುವುದು ಹಿಂದಿನಿಂದಲೂ ಬಂದಿರುವ ನಿಯಮ.ಅದೇ ರೀತಿ ಪ್ರಕ್ರಿಯೆ ನಡೆಯುತ್ತಿದೆʼ ಎಂದು ತಿಳಿಸಿದರು.
ರಾಜ್ಯ ದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ದ್ವೇಷ ದ ರಾಜಕಾರಣದಲ್ಲಿ ತೊಡಗಿದೆ.ಅರಣ್ಯಾಧಿಕಾರಿಗಳು ಶಾಸಕರ ಮೇಲೆ ದರ್ಪದಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಜನ ಪ್ರತಿನಿಧಿಗಳ ಹಕ್ಕು ಚಲಾಯಿಸಲು ಅಡ್ಡಿಯಾಗುತ್ತಿದೆ ಎಂದ ಅವರು, ಕಾಂಗ್ರೆಸ್ ನ ಆಂತರಿಕ ಜಗಳದಿಂದ ರಾಜ್ಯ ದಲ್ಲಿ ಸರಕಾರ ಶೀಘ್ರದಲ್ಲೇ ಪತನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜಾ,ರಾಜೇಶ್ ನಾಯ್ಕ್,ಡಾ.ಭರತ್ ಶೆಟ್ಟಿ, ಪ್ರತಾಪ್ ಸಿಂಹ ನಾಯಕ್,ಬಿಜೆಪಿ ವಕ್ತಾರ ಜಗದೀಶ್ ಶೇಣವ,ಮನಪಾ ಮೇಯರ್ ಸುಧೀರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







