ಎಸ್ಕೆಎಸ್ಸೆಸ್ಸೆಫ್ ಚೊಕ್ಕಬೆಟ್ಟು ಕ್ಲಸ್ಟರ್ ವತಿಯಿಂದ ರಕ್ತ ದಾನ ಶಿಬಿರ

ಸುರತ್ಕಲ್: ಎಸ್ಕೆಎಸ್ಸೆಸ್ಸೆಫ್ ಚೊಕ್ಕಬೆಟ್ಟು ಕ್ಲಸ್ಟರ್ ವತಿಯಿಂದ ಸಮಸ್ತ 100ನೇ ಪ್ರಚಾರಾರ್ಥ ಮತ್ತು ಮರ್ಹೂಮ್ ಅಬ್ದುಲ್ ರಹ್ಮಾನ್ ಕೋಳ್ತಮಜಲು ಅವರ ಸ್ಮರಣಾರ್ಥ ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತ ದಾನಿ ಬಳಗ ಹಾಗೂ ಕೆ.ಎಮ್.ಸಿ ಆಸ್ಪತ್ರೆಯ ಸಹಯೋಗದಲ್ಲಿ ಕೃಷ್ಣಾಪುರ ಅಲ್ ಹುದಾ ಜುಮ್ಮಾ ಮಸೀದಿ ವಠಾರದಲ್ಲಿ ರವಿವಾರ ಬೃಹತ್ ರಕ್ತ ದಾನ ಶಿಬಿರ ನಡೆಯಿತು.
ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ಚೊಕ್ಕಬೆಟ್ಟು ಕ್ಲಸ್ಟರ್ ಅಧ್ಯಕ್ಷ ಐ.ಬಿ. ಇಮ್ತಿಯಾಝ್ ಇಡ್ಯಾ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷ ಲತೀಫ್ ಕೃಷ್ಣಾಪುರ, ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್ ವಲಯ ಅಧ್ಯಕ್ಷ ಕೆ.ಎಂ. ಇಲ್ಯಾಸ್ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಇರ್ಷಾದ್ ಕೆರೆಕಾಡು, ಕೋಶಾಧಿಕಾರಿ ಹನೀಫ್ ಆದಮ್, ಅಬ್ಬಾಸ್ ಉಸ್ತಾದ್ ಕೃಷ್ಣಾಪುರ, ಮುಹಮ್ಮದ್ ಚೊಕ್ಕಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಚೊಕ್ಕಬೆಟ್ಟು ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಟಿ. ಮ್ಯೊದಿನ್ ಸ್ವಾಗತಿಸಿದರು. ಕಮಲ್ ಚೊಕ್ಕಬೆಟ್ಟು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.







