ಬೆಂಗರೆ ಪಲ್ಗುಣಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಪಣಂಬೂರು: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗರೆ ಪಲ್ಗುಣಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವಪತ್ತೆಯಾಗಿದೆ.
ಅಪರಿಚಿತ ವ್ಯಕ್ತಿ ಸುಮಾರು 40-43 ವರ್ಷದವರಾಗಿದ್ದು, ನೀಲಿ ಬಣ್ಣದ ಉದ್ದ ತೋಳಿನ ಜೀನ್ಸ್ ಅಂಗಿ ಅದರ ಒಳಗೆ ಹಳದಿ ಮತ್ತು ನೀಲಿ ಬಣ್ಣದ ದಪ್ಪಗೆರೆಗಳ ಟೀ ಶರ್ಟ್, ಬಳಿ ಬಣ್ಣದ ಬರಹಗಳಿರುವ ಕಪ್ಪು ಬಣ್ಣದ ಸ್ಪೋರ್ಟ್ಸ್ ಪ್ಯಾಂಟ್ ಧರಿಸಿದ್ದಾರೆ.
ಸದ್ಯ ಮೃತದೇಹವನ್ನು ಮೇಲೆತ್ತಿರುವ ಪಣಂಬೂರು ಪೊಲೀಸರು ವೆನ್ ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಚಹರೆಯ ವ್ಯಕ್ತಿಯ ಪರಿಚಯಸ್ಥರು, ವಾರೀಸುದಾರರು ಇದ್ದಲ್ಲಿ ಪಣಂಬೂರು ಪೊಲೀಸ್ ನಿರೀಕ್ಷಕ ಸಲೀಮ್ ಅಬ್ಬಾಸ್ +91 94808 05331 ಅಥವಾ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪಣಂಬೂರು ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
Next Story





