ಬೊಳಂತೂರು: ಸಾರ್ವಜನಿಕ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಬೊಳಂತೂರು: ಬಿ.ಕೆ.ಬಾಯ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ) ಬಂಗಾರಕೋಡಿ, ಬೊಳಂತೂರು ಜಂಟಿ ಆಶ್ರಯದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಹಯೋಗದೊಂದಿಗೆ, ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಸಹಭಾಗಿತ್ವ ದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸೌಹಾರ್ದಯುತ ವಾಗಿ "ರಕ್ತಸಂಬಂಧಿಗಳಾಗೋಣ ಬನ್ನಿ"ಎಂಬ ವಾಕ್ಯದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆ.20ರಂದು ಹಿರಿಯ ಪ್ರಾಥಮಿಕ ಶಾಲೆ ಬೊಳಂತೂರುನಲ್ಲಿ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಉಸ್ತಾದ್ ಅನ್ಸಾರ್ ಸಖಾಪಿ ಹುಸೈನಿ ದುವಾ ಆಶೀರ್ವಚನೆಯೊಂದಿಗೆ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಿ.ಕೆ.ಬಾಯ್ಸ್ ಆರ್ಟ್ಸ್& ಸ್ಪೋರ್ಟ್ಸ್ ಕ್ಲಬಿನ ಅದ್ಯಕ್ಷರಾದ ಮುಸ್ತಫಾ ಬಂಗಾರಕೋಡಿ ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ ಬೊಳಂತೂರು ಗ್ರಾಮ ಪಂಚಾಯತ್ ನೂತನ ಉಪಾಧ್ಯಕ್ಷರಾದ ಯಾಕೂಬ್ ದಂಡೆಮಾರ್, ಕೊಳ್ನಾಡು ಗ್ರಾಮ ಪಂಚಾಯತ್ ಅದ್ಯಕ್ಷರಾದ ಕೆ.ಅಶ್ರಪ್ ಸಾಲೆತ್ತೂರು, ಬೊಳಂತೂರು ಗ್ರಾ.ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ರೈ ನಾರ್ಶ, ಅಶ್ರಫ್ ಸುರಿಬೈಲ್ ಶೆಡ್ಡ್, ಅನ್ಸಾರ್ ಬಿ.ಜಿ.,ಅಬ್ದುಲ್ ಹಮೀದ್ ಬೈಲ್,ಹಜಾಜ್ ಸಮೂಹ ಸಂಸ್ಥೆಗಳ ಪಾಲುದಾರ ಉದ್ಯಮಿ ಮಹಮ್ಮದ್ ಶರೀಪ್ ಹಾಜಿ,ಮಾಜಿ ಕಬ್ಬಡ್ಡಿ ತರಬೇತುದಾರ ಜಿಲ್ಲೆಗೆ ಕಬ್ಬಡಿ ಪ್ರತಿಮೆಗಳನ್ನು ನೀಡಿದ ಮೊಯಿದ್ದೀನ್ ಗೊಳ್ತಮಜಲು,ರಾಜ್ಯಮಟ್ಟದ ಮಾಜಿ ಕಬಡ್ಡಿ ಆಟಗಾರ ಹಬೀಬ್ವಮಾಣಿ,ರಾಜ್ಯಮಟ್ಟದ ಕ್ರೀಡಾಪಟು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟಕ್ಕೆ ಕ್ರೀಡಾಪಟುಗಳನ್ನು ನೀಡುವಲ್ಲಿ ಯಶಸ್ವಿ ದೈಹಿಕ ಶಿಕ್ಷಕರಾದ ರಪೀಕ್ ಮಾಸ್ಟರ್ ಸಮಾಜ ಸೇವಕರಾದ ಹಸೈನಾರ್ ತಾಳಿತ್ತನೂಜಿ, ಅಮೆಚೂರು ಕಬ್ಬಡ್ಡಿ ತೀರ್ಪುಗಾರರದ ಬಶೀರ್ ಕದ್ಕಾರ್ ಜುನೈದ್ ಬಂಟ್ವಾಳ ಕಾರ್ಯನಿರ್ವಾಹಕ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿಸಿ ಹಜಾಜ್ ಸಂಸ್ಥೆಯ ಪಾಲುದಾರ ಶರೀಪ್ ಹಾಜಿ ಗೊಳ್ತಮಜಲು,ಅಂತರಾಷ್ಟ್ರೀಯ ಮಟ್ಟದ ಈಟಿ ಎಸೆತಗಾರ ಶಂಕರ್,ಬೊಳಂತೂರು ಗ್ರಾ.ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ರೈ, ನಾರ್ಶ, ಬೊಳಂತೂರು ಶಾಲೆಯ ದೈಹಿಕ ಶಿಕ್ಷಕರಾದ ಹರೀಶ್ ಕುಮಾರ್, ಹಸೈನಾರ್ ತಾಳಿತ್ತನೂಜಿ ರಕ್ತದಾನದ ಮಹತ್ವ ಅಸ್ಪತ್ರೆಗಳಲ್ಲಿ ರಕ್ತದಾನದ ಕೊರತೆ, ಬಿ.ಕೆ ಬಾಯ್ಸ್ ಸಮಾಜಮುಖಿ ಕೆಲಸದ ಬಗ್ಗೆ ಮಾತಾಡಿದರು. 92 ಯುನಿಟ್ ರಕ್ತ ಸಂಗ್ರಹಿಸುವ ಮೂಲಕ ರಕ್ತದಾನ ಮಾಡಿ ಜೀವದಾನಿಯಾದರು.
ಸಮಾರಂಭದಲ್ಲಿ ಕಬ್ಬಡಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಪ್ರೋ ಕಬ್ಬಡಿ ಆಟಗಾರರಾದ ರಕ್ಷತ್ ಪೂಜಾರಿ ಮೈಸೂರ್, ಮಿಥಿನ್ ಕುಮಾರ್, ಮಹಮ್ಮದ್ ಶಲೀಲ್, ಜ್ಯೂನಿಯರ್ ನ್ಯಾಷನಲ್ ಗಳಾದ ಮಹಮ್ಮದ್ ಅಪ್ರೀದ್, ಸುಶಾಂತ್ ಶೆಟ್ಟಿ, ನಾಸೀರ್, ಸುಕೇಶ್, ಶಶಾಂಕ್ ಆಚಾರ್ಯ, ಮಹಮ್ಮದ್ ಶರೀಫ್ ಕೋಡಿಕಂಡ, ಮಹಮ್ಮದ್ ಇಕ್ಬಾಲ್ ದಂಡೆಮಾರ್, ಮಹಮ್ಮದ್ ಪಯಾಝ್ ಬೊಳಂತೂರು, ಅಸ್ವಿದ್ ಇವರುಗಳನ್ನು ಆತಿಥಿಗಳ ಸಮ್ಮುಖದಲ್ಲಿ ಬಿ.ಕೆ.ಬಾಯ್ಸ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಕೆ ಬಾಯ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಇದರ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಅರ್ಪ್, ಉಪಾಧ್ಯಕ್ಷ ರಾದ ಅನೀಸ್ ಬಿ.ಜಿ ಸಹಿತ ಸದಸ್ಯರು, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಡಾ.ರೋನ್ ಹಾಗೂ ಸಿಬ್ಬಂದಿ ವರ್ಗವನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮಕ್ಕೆ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸದಸ್ಯ,ಬಿ.ಕೆ ಬಾಯ್ಸ್ ತಂಡದ ಗೌರವದ್ಯಕ್ಷರಾದ ಮುಸ್ತಫಾ ಬೊಳಂತೂರು ಸ್ವಾಗತಿಸಿ ಧನ್ಯವಾದ ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಹಮೀದ್ ಗೊಳ್ತಮಜಲು ನಿರೂಪಿಸಿದರು.







