ಬೊಳ್ಳಾಯಿ | ಎಸ್ಬಿಎಸ್ ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ

ಸುಹೈಲ್ ರಹ್ಮಾನ್, ಝೈನುದ್ದೀನ್ ಶಾಮಿಲ್, ಜೆ.ಎಮ್.ನಸೀಬ್
ಮಂಗಳೂರು : ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಇದರ ವಿದ್ಯಾರ್ಥಿಗಳ ಅಧಿಕೃತ ಒಕ್ಕೂಟ ಸುನ್ನೀ ಬಾಲ ಸಂಘ (SBS) ಇದರ 2025 -2026 ನೇ ಸಾಲಿನ ಸಮಿತಿಗೆ ಚುನಾವಣೆ ಪ್ರಕ್ರಿಯೆ ನಡೆಸಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಸುಹೈಲ್ ರಹ್ಮಾನ್, ಪ್ರಧಾನ ಕಾರ್ಯದರ್ಶಿಯಾಗಿ ಝೈನುದ್ದೀನ್ ಶಾಮಿಲ್, ಕೋಶಾಧಿಕಾರಿಯಾಗಿ J.M ನಸೀಬ್ ಆಯ್ಕೆಯಾದರು.
ಸದ್ರಿ ಸಮಿತಿಯ ಉಪಾಧ್ಯಕ್ಷರಾಗಿ ಇಸ್ಮಾಯಿಲ್ ರಿಹಾಂ, ಮುಹಮ್ಮದ್ ಅಶ್ವನ್, ಮುಹಮ್ಮದ್ ಹಾಶಿಮ್, ಕಾರ್ಯದರ್ಶಿಗಳಾಗಿ ಮುಹಮ್ಮದ್ ಝಾಹೀರ್, ಅಹ್ಮದ್ ಅರ್ಫಾಕ್, ಮುಹಮ್ಮದ್ ಸೈಫುಲ್ಲಾ, ಗ್ರೂಪ್ ಲೀಡರ್ ಗಳಾಗಿ ಮುಈನುದ್ದೀನ್ ಮಹ್ರೂಫ್, ಮುಹಮ್ಮದ್ ಸಜ್ಜಾದ್, ಮುಹಮ್ಮದ್ ಸಹದ್, ಮುಹಮ್ಮದ್ ಫರಾಝ್, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಸಾಕಿಬ್, ಮುಹಮ್ಮದ್ ಅಫ್ಲಲ್, ಮುಹಮ್ಮದ್ ಶಹದ್, ಮುಹಮ್ಮದ್ ಅಬ್ ಝರ್, ಮುಹಮ್ಮದ್ ಝಾಕಿರ್, ಮುಹಮ್ಮದ್ ಅರಫಾ ಇವರನ್ನು ಆಯ್ಕೆ ಮಾಡಲಾಯಿತು..
ಸಭೆಯ ಆರಂಭದಲ್ಲಿ ಮದ್ರಸ ಪ್ರಾಂಶುಪಾಲರಾದ ಅಕ್ಬರ್ ಹಿಮಮಿ ಸಖಾಫಿ ಕುಪ್ಪೆಟ್ಟಿ ಸ್ವಾಗತಿಸಿದರೆ, ನೂತನ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಶಾಮಿಲ್ ಧನ್ಯವಾದಗೈದರು.





