ಬೊಳ್ಳಾಯಿ :SBS ವಿದ್ಯಾರ್ಥಿ ಒಕ್ಕೂಟದ ಚುನಾವಣೆ

ಮಂಗಳೂರು - ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಇದರ ವಿದ್ಯಾರ್ಥಿಗಳ ಅಧಿಕೃತ ಒಕ್ಕೂಟ ಸುನ್ನೀ ಬಾಲ ಸಂಘ (SBS) ಇದರ ನೂತನ ಸಮಿತಿಗೆ ಚುನಾವಣೆ ಪ್ರಕ್ರಿಯೆಯು "ಉತ್ತಮ ಸಮಾಜದ ಉದಾತ್ತ ಪ್ರಜೆಗಳಾಗೋಣ" ಎಂಬ ಸಂದೇಶದೊಂದಿಗೆ ನಡೆಯಿತು.
ಚುನಾವಣೆಗೆ ಮುನ್ನುಡಿಯಾಗಿ ಮದ್ರಸ ಪ್ರಾಂಶುಪಾಲರಾದ ಅಕ್ಬರ್ ಹಿಮಮಿ ಸಖಾಫಿ ಕುಪ್ಪೆಟ್ಟಿ ಇವರ ನೇತೃತ್ವದಲ್ಲಿ ಗ್ರ್ಯಾಂಡ್ ಅಸೆಂಬ್ಲಿ ನಡೆಸಿ ತದ ನಂತರ ಚುನಾವಣಾ ಅಧಿಕಾರಿ ಹಾಫಿಲ್ ಇಸ್ಮಾಯಿಲ್ ಹನೀಫಿ ಕಂಚಿಲ ಇವರ ನೇತೃತ್ವದಲ್ಲಿ ಸ್ಟಾಫ್ ಕೌನ್ಸಿಲ್ ನ ಸಂಪೂರ್ಣ ಸಹಕಾರದೊಂದಿಗೆ ಮದ್ರಸ ಉಸ್ತುವಾರಿಗಳ ಮೇಲ್ನೋಟದಲ್ಲಿ ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಆಡಳಿತ ಸಮಿತಿಯ ಮಾರ್ಗದರ್ಶನದಲ್ಲಿ ಬಹಳ ಯಶಸ್ವಿಗಾಗಿ ಚುನಾವಣೆ ನಡೆಯಿತು.
ಮಾದ್ಯಮ,ಮೀಡಿಯಾ, ಮಿಲಿಟರಿ ಝಡ್ ,ಹೆಲ್ಪ್ ಡೆಸ್ಕ್ ,ವಿಶೇಷ ಮೆರುಗು ನೀಡಿತ್ತು.
ಸದ್ರಿ ಚುನಾವಣೆಯು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸಂವಿಧಾನದ ಹಕ್ಕು ಚಲಾವಣೆಗೆ ಸ್ಫೂರ್ತಿಯಾಗಲಿದೆ ಮತ್ತು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾಂದೀಯಾಗುವ ಮೂಲಕ ಉತ್ತಮ ಸಮಾಜದ ಉದಾತ್ತ ಪ್ರಜೆಗಳು ಆಗಲಿದ್ದಾರೆ ಎಂದು ಸ್ಥಳೀಯ ಖತೀಬರೂ,SJM ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆದ K.H.U ಶಾಫಿ ಮದನಿ ಅಲ್ ಅಝ್ಹರಿ ಚುನಾವಣೆಯ ಮುನ್ನ ನಡೆದ ಮುನ್ನುಡಿ ಭಾಷಣದಲ್ಲಿ ತಿಳಿಸಿದರು.
ಬುಧವಾರ ಸಂಜೆ ಫಲಿತಾಂಶ ಹೊರಬೀಳಲಿದೆ.










