ಬೋಳಾರ: ಪ್ರವಾದಿ ಸೀರತ್ ಪ್ರಯುಕ್ತ ರಕ್ತದಾನ ಶಿಬಿರ

ಮಂಗಳೂರು: ಬೋಳಾರ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೋಳಾರ ಇಸ್ಲಾಮಿಕ್ ಸೆಂಟರ್‌ನಲ್ಲಿ ಕೆಎಂಸಿ ಬ್ಲಡ್ ಬ್ಯಾಂಕ್‌ನ ಸಹಯೋಗದಲ್ಲಿ ಸೀರತ್ ಪ್ರಯುಕ್ತ ರಕ್ತದಾನ ಶಿಬಿರವು ರವಿವಾರ ನಡೆಯಿತು.
ಡಾ. ಸೈಫುದ್ದೀನ್ ಅಬ್ದುಲ್ಲಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಟ್ರಸ್ಟ್ ಉಪಾಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಿಹಿರ್ ಭಾಗವಹಿಸಿದ್ದರು.
ಟ್ರಸ್ಟಿ ಕೆ.ಎಂ. ಅಶ್ರಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಬಶ್ಶಿರ್ ಕಿರಾಅತ್ ಪಠಿಸಿದರು. ಟ್ರಸ್ಟಿ ಕೆ.ಅಬ್ದುರ‌್ರಹ್ಮಾನ್ ವಂದಿಸಿದರು. ಟ್ರಸ್ಟಿ ರಹ್ಮತುಲ್ಲಾಹ್ ಕಾರ್ಯಕ್ರಮ ನಿರೂಪಿಸಿದರು.
Next Story





