ಮಾ.28, 29, 30 ರಂದು ಉಳ್ಳಾಲ ಶ್ರೀ ಮಲರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ; ಪೂರ್ವಭಾವಿ ಸಭೆ

ಉಳ್ಳಾಲ: ಉಳ್ಳಾಲ ಬಂಡಿಕೊಟ್ಯದ ಶ್ರೀ ಮಲರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವವು ಇದೇ ಮಾರ್ಚ್ 28,29,30 ರಂದು ನಡೆಯಲಿದ್ದು, ಆ ಪ್ರಯುಕ್ತ ರವಿವಾರದಂದು ಕ್ಷೇತ್ರದಲ್ಲಿ ದೇವಸ್ಥಾನ, ದೈವಸ್ಥಾನ, ಮಠ, ಮಂದಿರ ಮತ್ತು ಸಂಘ ಸಂಸ್ಥೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಅವರನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಬಂಡಿಕೊಟ್ಯ ಶ್ರೀ ಮಲರಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಂದರ ಉಳ್ಳಾಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಲರಾಯ ದೈವಸ್ಥಾನದ ಅರ್ಚಕರಾದ ಲತೀಶ್ ಯಾನೆ ಮುಂಡ ಪೂಜಾರಿ, ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್, ಪ್ರಮುಖರಾದ ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷರಾದ ಸದಾನಂದ ಬಂಗೇರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುರೇಶ್ ಭಟ್ನಗರ, ತಲಪಾಡಿ ಅಲಂಕಾರಗುಡ್ಡೆ ಶ್ರೀ ಮಲರಾಯ ದೈವಸ್ಥಾನದ ಪ್ರಮುಖರಾದ ರವೀಂದ್ರನಾಥ ರೈ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ, ಮಂಗಳೂರು ವಿಶ್ವವಿದ್ಯಾಲಯದ ನಾರಾಯಣಗುರು ಅಧ್ಯಯನ ಪೀಠದ ಸದಸ್ಯರಾದ ಸತೀಶ್ ಕರ್ಕೇರ, ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ ಉಳ್ಳಾಲ್, ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೀಪಕ್ ಪಿಲಾರು, ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಸುರೇಖ ಚಂದ್ರಹಾಸ್, ಉಳ್ಳಾಲ ಬೈಲು ವೈದ್ಯನಾಥ ಕ್ಷೇತ್ರದ ಪ್ರಮುಖರಾದ ರವಿ ಸುವರ್ಣ,ಉಳ್ಳಾಲ ಲಕ್ಷ್ಮೀ ನರಸಿಂಹ ಕ್ಷೇತ್ರದ ಪ್ರಮುಖರಾದ ಶ್ರೀಕರ ಕಿಣಿ,ಪ್ರಮುಖರಾದ ನಿಶಾನ್ ಪೂಜಾರಿ ಬಂಡಿಕೊಟ್ಯ,ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ಪ್ರಮುಖರಾದ ಸುಂದರ ಉಳಿಯ,ಗೋಳಿಯಡಿ ಅಯ್ಯಪ್ಪ ಮಂದಿರದ ಪ್ರಮುಖರಾದ ದಿನೇಶ್ ಉಳಿಯ,ವಳಚಿಲತ್ತಾಯ ದೈವಸ್ಥಾನದ ಪ್ರಮುಖರಾದ ಶ್ರೀಕಾಂತ್ ಬಂಗೇರ,ಕೊಲ್ಯ ಬಿಲ್ಲವ ಸಮಾಜದ ಪ್ರಮುಖರಾದ ವೇಣುಗೋಪಾಲ ಕೊಲ್ಯ,ಕೋರ್ದಬ್ಬು ದೈವಸ್ಥಾನದ ಚಂದ್ರಹಾಸ ಗುರಿಕಾರ,ಉಳ್ಳಾಲ ಗೋಪಾಲಕೃಷ್ಣ ಮಠದ ಜಯಂತ್ ಭಟ್,ಉಳ್ಳಾಲ ವೀರಭಧ್ರ ಕ್ಷೇತ್ರದ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು.ಮಧ್ವರಾಜ್ ತೊಕ್ಕೊಟ್ಟು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉದಯ ಆರ್.ಕೆ ಉಳ್ಳಾಲ್ ವಂದಿಸಿದರು.ನವನೀತ್ ಉಳ್ಳಾಲ್ ನಿರೂಪಿಸಿದರು.





