ಮಂಗಳೂರಿನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮೆಂಡ್ಸ್ ಶೋ ರೂಮ್‌ನಲ್ಲಿ ನ.30ರ ತನಕ ‘ವಧುವಿನ ಆಭರಣಗಳ ಪ್ರದರ್ಶನ’

ಮಂಗಳೂರು, ನ.22: ಪ್ರತಿಷ್ಠಿತ ಮಲಬಾರ್ ಗೋಲ್ಡ್ ಡೈಮಂಡ್ಸ್‌ನ ಮಂಗಳೂರು ಶೋರೂಮ್‌ನಲ್ಲಿ ವಧುವಿನ ಆಭರಣಗಳ ಪ್ರದರ್ಶನ ಶನಿವಾರ ಆರಂಭಗೊಂಡಿದ್ದು, ನ.30ರ ತನಕ ನಡೆಯಲಿದೆ.
ನಿಶ್ಚಿತಾರ್ಥದ ಉಂಗುರಗಳಿಂದ ಹಿಡಿದು ಆಕರ್ಷಕ ವಧುವಿನ ಆಭರಣ ಸೆಟ್‌ಗಳವರೆಗೆ ಇರಲಿದೆ.ವಧುವಿನ ಆಭರಣಗಳನ್ನು ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಮತ್ತು ಆಂಕೊಲಾಜಿಸ್ಟ್ ಡಾ.ಮರಿಯಮ್ ಅಂಜುಮ್ ಇಫ್ತಿಕರ್ ಹಾಗೂ ಮೂಡಬಿದ್ರೆಯ ಆಳ್ವಾಸ್ ಫಾರ್ಮಸಿಯ ಆಡಳಿತ ನಿರ್ದೇಶಕಿ ಡಾ.ಗ್ರೀಷ್ಮಾ ವಿವೇಕ್ ಆಳ್ವ ಅನಾವರಣಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಂಗಳೂರಿನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಸ್ಟೋರ್ ಹೆಡ್ ಶರತ್ ಚಂದ್ರನ್, ಮ್ಯಾನೆಜ್‌ಮೆಂಟ್ ಟೀಮ್‌ನ ಅಹ್ಮದ್ ನಝರ್, ಶೋರೂಮ್ ಮ್ಯಾನೇಜರ್ ರಘು ರಾಮ್ ಸಿ.ಎಸ್., ಸೇಲ್ಸ್ ಮ್ಯಾನೇಜರ್ ಗಿರೀಶ್ ರೈ, ಡೆಪ್ಯುಟಿ ಸೇಲ್ಸ್ ಮ್ಯಾನೇಜರ್ ಮುಹಮ್ಮದ್ ಸಮೀರ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಕ್ ಫರ್ಹಾನ್ ಉಪಸ್ಥಿತರಿದ್ದರು.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಪ್ರಸಿದ್ಧ ಉಪ-ಬ್ರ್ಯಾಂಡ್‌ಗಳಾದ ಭಾರತೀಯ ಪಾರಂಪರಿಕ ಆಭರಣ ಡಿವೈನ್ ಮತ್ತು ಕೈಯಿಂದ ತಯಾರಿಸಿದ ಆಭರಣಗಳು ಎಥ್ನಿಕ್, ವಜ್ರದ ಆಭರಣ ಬ್ರ್ಯಾಂಡ್ ಮೈನ್ ಮತ್ತು ಅನ್‌ಕಟ್ ವಜ್ರದ ಆಭರಣ ಬ್ರ್ಯಾಂಡ್ ಎರಾವನ್ನು ಒಳಗೊಂಡಿದೆ. ಪೋಲ್ಕಿ ಡೈಮಂಡ್ ಆಭರಣ ಬ್ರ್ಯಾಂಡ್ ವಿರಾಜ್‌ನ್ನು ಒಳಗೊಂಡಿದೆ.
ವಿಶ್ವ ದರ್ಜೆಯ ಸೌಲಭ್ಯಗಳು ಮತ್ತು ಉತ್ಪನ್ನಗಳಲ್ಲದೆ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಜೀವನಪರ್ಯಂತ ನಿರ್ವಹಣೆ, ಒಂದು ವರ್ಷದ ಖಚಿತ ವಿಮೆ, ವಿನಿಮಯಕ್ಕೆ ಶೂನ್ಯ ಕಡಿತ ಮತ್ತು ಎಲ್ಲ ಚಿನ್ನದ ಆಭರಣಗಳಿಗೆ ಮರುಖರೀದಿ ಗ್ಯಾರಂಟಿಯನ್ನು ಸಹ ನೀಡಲಾಗುತ್ತದೆ. ಪ್ರತಿಯೊಂದು ಉತ್ಪನ್ನವು ಒಟ್ಟು ತೂಕ, ಕಲ್ಲಿನ ತೂಕ ಮತ್ತು ಉತ್ಪಾದನಾ ವೆಚ್ಚವನ್ನು ವಿವರಿಸುವ ಬೆಲೆಯನ್ನು ಹೊಂದಿದೆ.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಬಗ್ಗೆ :
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಪ್ರಮುಖ ಭಾರತೀಯ ವ್ಯಾಪಾರ ಸಮೂಹವಾದ ಮಲಬಾರ್ ಗ್ರೂಪ್‌ನ ಪ್ರಮುಖ ಕಂಪೆನಿಯಾಗಿದೆ. 1993ರಲ್ಲಿ ಕೇರಳದಲ್ಲಿ ಸ್ಥಾಪನೆಗೊಂಡ ಸಂಸ್ಥೆಯು ಇಂದು 14 ದೇಶಗಳಲ್ಲಿ 400ಕ್ಕೂ ಅಧಿಕ ಮಳಿಗೆಗಳು ಮತ್ತು 14 ಸಗಟು ಘಟಕಗಳ ಬಲಿಷ್ಠ ಚಿಲ್ಲರೆ ಜಾಲವನ್ನು ಜೊತೆಗೆ ಭಾರತ, ಆಸ್ಟ್ರೇಲಿಯಾ, ಕೆನಡಾ, ಯುಕೆ, ಅಮೆರಿಕ , ಮಧ್ಯಪ್ರಾಚ್ಯದಲ್ಲಿ ಕಚೇರಿಗಳು, ವಿನ್ಯಾಸ ಕೇಂದ್ರಗಳು ಮತ್ತು ಕಾರ್ಖಾನೆಗಳನ್ನು ಹೊಂದಿದೆ.







