ಬ್ಯಾರಿ ಅಕಾಡಮಿ ಚಮ್ಮನ ಮತ್ತು ವಿದ್ಯಾರ್ಥಿ ಸಂಗಮ: ಸ್ವಾಗತ ಸಮಿತಿ ರಚನೆ

ಪುತ್ತೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಡಿ.7ರಂದು ಪುತ್ತೂರು ಪುರಭವನದಲ್ಲಿ ಹಮ್ಮಿಕೊಂಡಿರುವ ಬ್ಯಾರಿ ಅಕಾಡಮಿ ಚಮ್ಮನ’ (ಗೌರವ ಪುರಸ್ಕಾರ) ಮತ್ತು ’ವಿದ್ಯಾರ್ಥಿ ಸಂಗಮ’ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆಯು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೊಳುವಾರಿನ ಆಕರ್ಷನ್ ಬಿಲ್ಡರ್ಸ್ ಕಚೇರಿಯಲ್ಲಿ ನಡೆಯಿತು.
ಅಕಾಡಮಿಯ ಸದಸ್ಯ ಬಿ.ಎಸ್. ಮುಹಮ್ಮದ್ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕಿ ಸಾರಾ ಅಲಿ ಪರ್ಲಡ್ಕ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕೆ.ಪಿ. ಅಹ್ಮದ್ ಹಾಜಿ, ಸಂಚಾಲಕರಾಗಿ ಡಾ.ಹಾಜಿ ಎಸ್. ಅಬೂಬಕರ್ ಆರ್ಲಪದವು, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಸಹ ಸಂಚಾಲಕರಾಗಿ ಬಿ.ಎ. ಶಕೂರ್ ಹಾಜಿ ಕಲ್ಲೆಗ, ಉಪಾಧ್ಯಕ್ಷರುಗಳಾಗಿ ಎಲ್. ಟಿ. ಅಬ್ದುಲ್ ರಝಾಕ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಹಾಜಿ ಅಬ್ದುಲ್ ರಹಿಮಾನ್ ಆಝಾದ್,ಇಬ್ರಾಹಿಂ ಗೋಳಿಕಟ್ಟೆ, ಕಾರ್ಯದರ್ಶಿಗಳಾಗಿ ವಿ.ಕೆ. ಶರೀಫ್ ಬಪ್ಪಳಿಗೆ ಮತ್ತು ಅಬ್ದುಲ್ ಹಮೀದ್ ಸೋಂಪಾಡಿ, ಪತ್ರಿಕಾ ಕಾರ್ಯದರ್ಶಿಯಾಗಿ ಶೇಖ್ ಝೈನುದ್ದೀನ್, ಸಂಘಟನಾ ಕಾರ್ಯದರ್ಶಿಗಳಾಗಿ ನ್ಯಾಯವಾದಿ ಕೆ.ಎಂ.ಸಿದ್ದೀಕ್, ಕೆ.ಉಮರ್ ಕರಾವಳಿ, ಹಾಜಿ ಅಶ್ರಫ್ ಕಲ್ಲೆಗ ಹಾಗೂ ಸದಸ್ಯರಾಗಿ ಮುಹಮ್ಮದ್ ಶಾಫಿ ಪಾಪೆತಡ್ಕ, ಪಿ. ಮುಹಮ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.





