ಸೋಣಂಗೇರಿ: ಬಾವಿಗೆ ಬಿದ್ದ ಕರುವಿನ ರಕ್ಷಣೆ

ಸುಳ್ಯ: ಸೋಣಂಗೇರಿ ಬಸ್ಸು ತಂಗುದಾನದ ಬಳಿ ಇರುವ ಬಾವಿಗೆ ಬಿದ್ದ ಕರುವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಸೋಣಂಗೇರಿಯ ಯೋಗಿಶ್ ಎಂಬವರ ಕರು ಬಸ್ಸು ತಂಗುದಾನದ ಬಳಿ ಇರುವ 15 ಅಡಿ ಆಳದ ಬಾವಿಗೆ ಬಿದ್ದಿತ್ತು. ಬಳಿಕ ಕರುವನ್ನು ಅಗ್ನಿಶಾಮಕ ದಳ ಮತ್ತು ಊರವರು ಸೇರಿ ಸುರಕ್ಷಿತವಾಗಿ ಮೇಲಕೆತ್ತಿ ರಕ್ಷಣೆ ಮಾಡಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಕಿರಣ್ ಕುಮಾರ್. ಎಸ್, ಸಿಬ್ಬಂದಿಯವರಾದ ಮಹಮ್ಮದ್ ರಫೀಕ್, ಚಂದ್ರಶೇಖರ ನಾಯಕ, ಸಂಜೀವ ಗೌಡ, ಹರ್ಷವರ್ಧನ, ಮೋಹನ್ ಬಾಬು, ಹೊನ್ನಪ್ಪ ಭಾಗವಹಿಸಿದರು.
Next Story





