‘ನಾಡೋಜ’ ಕವಿ ಕಯ್ಯಾರ ಕಿಞ್ಞಣ್ಣ ರೈ ಸ್ಮರಣಾರ್ಥ ಕವನ, ಕಿರು ಕಥೆಗಳ ಆಹ್ವಾನ

ಮಂಗಳೂರು, ಆ. 9: ಆರ್ಟ್ ಕೆನರಾ ಟ್ರಸ್ಟ್, ಮಂಗಳೂರು ಮತ್ತು ಕವಿತಾ ಕುಟೀರ, ಪೆರಡಾಲ, ಕಾಸರಗೋಡಿನ ಪೆರಡಾಲದ ನವಜೀವನ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿ ವಿಜೇತ ಸಾಹಿತಿ ದಿವಂಗತ ಕಯ್ಯಾರ ಕಿಞ್ಞಣ್ಣ ರೈ ಅವರ ಸ್ಮರಣಾರ್ಥ 101 ಕವನಗಳು ಮತ್ತು ಕಿರು ಕಥೆಗಳ (ಮೈಕ್ರೋ ಸ್ಟೋರೀಸ್) ಸಂಕಲನವನ್ನು ರಚಿಸಲು ಆಯೋಜಿಸಿದೆ. 18ರಿಂದ 35 ವಷರ್ ವಯಸ್ಸಿನ (ಜನವರಿ 1988 ಮತ್ತು ಡಿಸೆಂಬರ್ 2004 ರ ನಡುವೆ ಜನನ) ಮತ್ತು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹುಟ್ಟಿ, ಬೆಳೆದ ಮತ್ತು ಶಿಕ್ಷಣ ಪಡೆದ ಯುವ ಬರಹಗಾರರಿಗೆ ಈ ಪ್ರಕಟನೆಗೆ ಕೃತಿಗಳನ್ನು ಸಲ್ಲಿಸಲು ಆಹ್ವಾನವಿದೆ.
ಬರವಣಿಗೆಯು ಕನ್ನಡದಲ್ಲಿರಬೇಕು. ಕವಿತೆಗಳು ಗರಿಷ್ಠ್ಠ 300 ಪದಗಳು ಮತ್ತು ಕಿರು ಕಥೆಗಳು 500 ಪದಗಳಿಗೆ ಒಳಪಟ್ಟಿರಬೇಕು. 3-5 ಕವನಗಳು, ಕಿರು ಕಥೆಗಳು ಮತ್ತು 10-12 ಚುಟುಕು ಕವನಗಳನ್ನು ಆಯ್ಕೆಗಾಗಿ ಸಲ್ಲಿಸಬಹುದು. ಬರಹ ಯುನಿಕೋಡ್‌ನಲ್ಲಿ ಇರಬೇಕು. ಸ್ವಂತ ರಚನೆಗಳಾಗಿರಬೇಕು. ಯಾವುದೇ ಪತ್ರಿಕೆಗಳಲ್ಲಿ ಯಾ ಬ್ಲಾಗ್‌ಗಳಲ್ಲಿ ಪ್ರಕಟವಾಗಿರಬಾರದು. ಯಾವುದೇ ರೀತಿಯ ಕೃತಿಚೌರ್ಯಕ್ಕೆ ಅವಕಾಶವಿಲ್ಲ. ಮಾಡಿದಲ್ಲಿ ಅವರೇ ಜವಾಬ್ದಾರರು. ಅಂಚೆ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇಮೇಲ್‌ನೊಂದಿಗೆ 80 ಪದಗಳನ್ನು ಮೀರದ ಕಿರು ಪರಿಚಯವನ್ನು ಪ್ರತ್ಯೇಕ ಲಗತ್ತಾಗಿ ಕಾಲೇಜು ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್, ಫೋಟೋ ಪ್ರತಿಯೊಂದಿಗೆ ಸಲ್ಲಿಸಬೇಕು. ಕೃತಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 10, 2023 ಕೊನೆಯ ದಿನಾಂಕವಾಗಿದ್ದು, artkanaratrust@gmail.com
ವಿಳಾಸ : ಆರ್ಟ್ ಕೆನರಾ ಟ್ರಸ್ಟ್, ಕೊಡಿಯಾಲಗುತ್ತು ಕಲೆ ಮತ್ತು ಸಂಸ್ಕತಿ ಕೇಂದ್ರ 12/1139/1, ಕೊಡಿಯಾಲಗುತ್ತು (ಪಶ್ಚಿಮ) ಬಂಗಾರ್ ಗುತ್ತು ರಸ್ತೆ, ಮಂಗಳೂರು - 575003 ಎಂದು ಪ್ರಕಟನೆ ತಿಳಿಸಿದೆ.







