ಹರೇಕಳ-ಅಡ್ಯಾರ್ ಸೇತುವೆಯಲ್ಲಿ ಕಾರುಗಳು ಢಿಕ್ಕಿ; ಮೂವರಿಗೆ ಗಾಯ

ಕೊಣಾಜೆ: ಹರೇಕಳ- ಅಡ್ಯಾರ್ ಹೊಸ ಸೇತುವೆಯಲ್ಲಿ ಕಾರುಗಳು ನಡುವೆ ಮುಖಾಮುಖಿ ಢಿಕ್ಕಿಯಾಗಿ ಮೂವರು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಅಡ್ಯಾರ್ ಕಡೆಯಿಂದ ಹರೇಕಳ ಬರುತ್ತಿದ್ದ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಆಲ್ಟೋ ಕಾರು ಹಾಗೂ ಎದುರಿನಿಂದ ಬಂದ ಇಕೋ ಸ್ಪೋರ್ಟ್ಸ್ ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ.
ಹರೇಕಳ-ಅಡ್ಯಾರ್ ಸಂಪರ್ಕಿಸುವ ಸೇತುವೆಯಲ್ಲಿ ಸಂಭವಿಸಿದ ಮೊದಲ ಅಪಘಾತ ಎನ್ನಲಾಗಿದೆ.
ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಇನ್ನೊಂದು ಕಾರಿನಲ್ಲಿದ್ದ ಚಾಲಕ ಗಾಯಗೊಂಡಿದ್ದಾರೆ. ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





