ಮಕ್ಕಳೇ ನಿಮ್ಮಲ್ಲಿ ಕಲಿಯುವ ಹುಚ್ಚು, ಕಿಚ್ಚು ಇರಲಿ: ರಫೀಕ್ ಮಾಸ್ಟರ್

ವಾಮಂಜೂರು : ಇಸ್ಲಾಹುಲ್ ಇಸ್ಲಾಂ ಮದ್ರಸ ವಾಮಂಜೂರುನಲ್ಲಿ ಮಕ್ಕಳಿಗೆ ಮತ್ತು ರಕ್ಷಕರಿಗೆ ವಿಶೇಷ ತರಬೇತಿ ಶಿಬಿರ ನಡೆಯಿತು.
ತರಬೇತುದಾರ ರಫೀಕ್ ಮಾಸ್ಟರ್ ಮಂಗಳೂರು ಮಾತನಾಡಿ, ಮಕ್ಕಳೇ ನಿಮ್ಮಲ್ಲಿ ಕಲಿಯುವ ಹುಚ್ಚು ಈಗಲೇ ಬೆಳೆಯಲಿ ಮತ್ತು ಆ ಕಿಚ್ಚು ಸದಾ ಇರಲಿ ಎಂದರು.
ಮಕ್ಕಳನ್ನು ಹೇಗೆ ಬೆಳೆಸಬೇಕು, ಶಿಕ್ಷಣ ಯಾವ ರೀತಿಯಲ್ಲಿ ಸಾಗಬೇಕು ಎನ್ನುವ ಹಲವಾರು ವಿಷಯಗಳನ್ನು ರಕ್ಷಕರಿಗೆ ತಿಳಿಸಿದರು.
ಸಭೆಯನ್ನು ಸ್ಥಳೀಯ ಖತೀಬ್ ಮುಹಮ್ಮದ್ ಫಾಯಿಝ್ ಫಾಳಿಲಿ ದುಆ ನೆರವೇರಿಸುವ ಮೂಲಕ ಚಾಲನೆ ಗೈದರು. ಜಮಾಅತ್ ಅಧ್ಯಕ್ಷರಾದ ಇಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ರಶೀದ್ ಅಮಾನ್, ಇಸ್ಮಾಯಿಲ್, ಆಬೂಸ್ವಾಲಿಹ್ ಮುಂತಾದ ನಾಯಕರು ಉಪಸ್ಥಿತರಿದ್ದರು. ಪ್ರಿನ್ಸಿಫಾಲ್ ಜಅಫರ್ ಸ್ವಾದಿಕ್ ಸಖಾಫಿ ನಿರೂಪಿಸಿದರು.
Next Story





