ಯೆನೆಪೊಯ ವಿವಿಯಲ್ಲಿ ಗರ್ಭಕಂಠ ಕುರಿತ ʼಕಾಲ್ಪಸ್ಕೋಪಿʼ ಕಾರ್ಯಾಗಾರ
ಕ್ಯಾನ್ಸರ್ ಪತ್ತೆಯಲ್ಲಿ ʼಕಾಲ್ಪಸ್ಕೋಪಿʼ ವಿಧಾನದಲ್ಲಿ ಉತ್ಕೃಷ್ಟತೆ ಪಡೆಯಲು ತರಬೇತಿ

ಮಂಗಳೂರು : ಇಲ್ಲಿನ ಯೆನೆಪೊಯ ವಿಶ್ವವಿದ್ಯಾನಿಲಯದಲ್ಲಿ ಸ್ಕೋಪ್ ಮಾಸ್ಟರ್ಸ್ ಫೋರಮ್ ವತಿಯಿಂದ ಒಂದು ದಿನದ ಕಾಲ್ಪಸ್ಕೋಪಿ ಕಾರ್ಯಾಗಾರ ಫೆಬ್ರವರಿ 10 ರಂದು ಶನಿವಾರ ನಡೆಯಿತು.
ಅತಿಥಿಗಳಾಗಿ ಆಗಮಿಸಿದ್ದ ಉಪಕುಲಪತಿ ವಿಜಯಕುಮಾರ್ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್‌ನ ಆರಂಭಿಕ ಪತ್ತೆಯ ಮಹತ್ವದ ಕುರಿತು ತಿಳಿಸಿದರು.
ಡಾ.ಪ್ರಿಯಾ ಗಣೇಶ್ ಅವರು ಮಾತನಾಡಿ ಗರ್ಭಕಂಠದ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚುವಲ್ಲಿ ಕಾಲ್ಪಸ್ಕೋಪಿ, ಮತ್ತು ಲಸಿಕೆಗಳ ಪಾತ್ರದ ಕುರಿತು ಮಾತನಾಡಿದರು.
ಯೆನೆಪೊಯ ಕುಲಪತಿ ಡಾ ಅಬ್ದುಲ್ಲಾ ಕುಂಞಿ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮದ ಸಂಘಟಕರಾದ ಡಾ ಅಂಜುಮ್ ಇಫ್ತಿಕರ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು. ಯೇನಪೊಯಾ ವಿವಿಯಲ್ಲಿ ಕ್ಯಾನ್ಸರ್ ಸಂಬಂಧಿತ ಕೆಲಸಗಳಿಗಾಗಿ ಡಾ.ವಿಜಯಕುಮಾರ್ ಅವರನ್ನು ಅಭಿನಂದಿಸಿದರು.
Next Story







