ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್‌ರ ಪುಣ್ಯಸ್ಮರಣೆ

ಮಂಗಳೂರು, ಸೆ.13: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್‌ರ ಪುಣ್ಯಸ್ಮರಣೆ ಕಾರ್ಯಕ್ರಮವು ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆಯಿತು.
ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಮಾತನಾಡಿ ಲೋಕಸಭಾ, ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ, ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ ಆಸ್ಕರ್ ಫೆರ್ನಾಂಡಿಸ್ ಸಾಮಾನ್ಯ ಕಾರ್ಯಕರ್ತರಂತೆ ಗುರುತಿಸಿ ಕೊಂಡಿದ್ದರು. ಮೃದು, ಪ್ರಾಮಾಣಿಕ ವ್ಯಕ್ತಿಯಾಗಿದ್ದ ಅವರು ಓರ್ವ ಅಜಾತ ಶತ್ರುವಾಗಿದ್ದರು. ಎಲ್ಲರ ಜೊತೆ ಪ್ರೀತಿ ವಿಶ್ವಾಸ ದಿಂದ ನಡೆದುಕೊಳ್ಳುತ್ತಿದ್ದರು. ಅವರ ಬದುಕು ಇತರ ನಾಯಕರಿಗೆ ಮಾದರಿಯಾಗಿದೆ. ರಾಜ್ಯಕ್ಕೆ ಅವರ ಕೊಡುಗೆ ಅಪಾರ ಎಂದು ಸ್ಮರಿಸಿಕೊಂಡರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಎಸ್.ಅಪ್ಪಿ, ಜೆ.ಅಬ್ದುಲ್ ಸಲೀಂ, ನವೀನ್ ಡಿಸೋಜ, ಶಾಹುಲ್ ಹಮೀದ್ ಕೆಕೆ, ಶುಬೋದಯ ಆಳ್ವ, ಟಿ.ಹೊನ್ನಯ್ಯ, ನೀರಜ್‌ಚಂದ್ರಪಾಲ್, ಲತೀಫ್ ಕಂದಕ್, ಸಬಿತಾ ಮಿಸ್ಕಿತ್, ಜೆಸಿಂತಾ ಆಲ್ಫ್ರೆಡ್, ಕವಿತಾ ವಾಸು, ಸಂಶುದ್ದೀನ್ ಬಂದರ್, ಅಶ್ರಫ್ ಬಜಾಲ್, ಮುಹಮ್ಮದ್ ಅಲ್ತಾಫ್ ಸುರತ್ಕಲ್, ಸುಹಾನ್ ಆಳ್ವ, ಡಿ.ಎಂ. ಮುಸ್ತಫಾ, ಭಾಸ್ಕರ್ ರಾವ್, ಶಬ್ಬೀರ್ ಎಸ್, ನಝೀರ್ ಬಜಾಲ್, ವಿಕಾಶ್ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಶಮೀರ್ ಪಜೀರ್, ಟಿ.ಕೆ. ಸುಧೀರ್, ಸೋನ್ ಡಿಸೋಜ, ಫಯಾಝ್ ಅಮ್ಮೆಮ್ಮಾರ್, ಮಂಜುಳಾ ನಾಯಕ್, ಸಮರ್ಥ್ ಭಟ್, ಇಮ್ರಾನ್ ಎ.ಆರ್, ಚಂದ್ರಕಲಾ ಜೋಗಿ, ಸುರೇಶ್ ಪೂಜಾರಿ ಕುಳಾಯಿ, ಯಶವಂತ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.







