ಬೋಳಿಯಾರ್: ಒಡಕ್ಕಿನಕಟ್ಟೆ ಕಾಂಕ್ರೀಟು ರಸ್ತೆ ಉದ್ಘಾಟನೆ
ಮೂಲಭೂತ ಸೌಲಭ್ಯಗಳ ವಿಸ್ತರಣೆಗೆ ಆದ್ಯತೆ: ಯು.ಟಿ.ಖಾದರ್

ಕೊಣಾಜೆ: ಬೋಳಿಯಾರ್ ಗ್ರಾಮದ ಕಾಂಪಾಡಿಯಿಂದ ಒಡಿಕ್ಕಿನ ಕಟ್ಟೆ ತನಕ ನಿರ್ಮಾಣಗೊಂಡ ನೂತನ ಕಾಂಕ್ರೀಟು ರಸ್ತೆಯನ್ನು ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ರವಿವಾರ ಉದ್ಘಾಟಿಸಿದರು.
ನೂತನ ಕಾಂಕ್ರೀಟು ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಗ್ರಾಮಸ್ಥರ ಹಲವಾರು ವರ್ಷಗಳ ಬೇಡಿಕೆಯಂತೆ ಇದೀಗ ಸುಸಜ್ಜಿತ ಕಾಂಕ್ರೀಟು ರಸ್ತೆ ನಿರ್ಮಾಣವಾಗಿದೆ. ರಸ್ತೆಯು ಸುಮಾರು 25 ವರ್ಷಗಳ ಬಾಳಿಕೆಯ ದೃಷ್ಟಿಯಿಂದ ಕಾಂಕ್ರೀಟು ರಸ್ತೆಯನ್ನೇ ನಿರ್ಮಾಣ ಮಾಡಲಾಗಿದೆ ಎಂದರು.
ಈ ಭಾಗದ ಮೂಲಭೂತ ಸೌಲಭ್ಯಗಳ ವಿಸ್ತರಣೆಗೆ ಮೊದಲಾ ಆದ್ಯತೆ ನೀಡಲಾಗಿದ್ದು, ಬೋಳಿಯಾರ್ ಮಿತ್ತಕೊಡಿ,ಮಜಿ, ಸೇರಿದಂತೆ ಇತರ ಒಳ ರಸ್ತೆಗಳಿಗೂ ಅನುದಾನವನ್ನು ಮೀಸಲಿಡಲಾಗಿದ್ದು ಆದಷ್ಟು ಶೀಘ್ರ ನಿರ್ಮಾಣವಾಗಲಿದೆ. ಅಲ್ಲದೆ ಈ ಭಾಗದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ರೂಪಿಸಲಾಗಿದೆ ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಶಕೂರು, ಮಂಗಳೂರು ತಾ.ಪಂ. ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಮುಖಂಡರಾದ ಅಬ್ದುಲ್ ಜಲೀಲ್ ಮೊಂಟುಗೊಳಿ, ಶ್ರೀರಾಮ ಭಜನಾ ಮಂದಿರದ ಉಪಾಧ್ಯಕ್ಷ ನಾಗಪ್ಪ ಕುಲಾಲ್, ಗೌರವಾಧ್ಯಕ್ಷ ಯಶೋಧರ ಶೆಟ್ಟಿ, ಕಾರ್ಯದರ್ಶಿ ಭವಿಷ್ ಕುಲಾಲ್, ಸದಸ್ಯರಾದ ನಂದೀಪ್ ಶೆಟ್ಟಿ, ಭಾಸ್ಕರ ಶೆಟ್ಟಿ ಕುಂಟುಪುಣಿ, ಸುಧಾಕರ್ ಕುಲಾಲ್, ಸುರೇಶ್ ಒಡಕಿನ ಕಟ್ಟೆ, ಭಾಸ್ಕರಕುಲಾಲ್ ಉದ್ದ, ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಭಾಸ್ಕರ ಶೆಟ್ಟಿ, ಸದಸ್ಯರಾದ ಜೆಸಿಂತಾ ಪಿಂಟೋ, ಶಾರದಾ, ಮೈಮುನಾ, ಸಿದ್ದೀಕ್, ಸಮೀರ್, ಬೋಳಿಯಾರ್ ವಲಯ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್, ಜಬ್ಬಾರ್ ಬೋಳಿಯಾರ್ ಇನ್ನಿತರರು ಉಪಸ್ಥಿತರಿದ್ದರು.
ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋಹನ್ ದಾಸ್ ಗಾಂಭೀರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಬಾಗತಿಸಿದರು.







