SIO ಪಾಣೆಮಂಗಳೂರು ಶಾಖೆ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಬಂಟ್ವಾಳ ತಾಲೂಕು ಶಿಕ್ಷಕರಿಗೆ ಅಭಿನಂದನೆ

ಮಂಗಳೂರು: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ದೇವಸ್ಯ ಪಡೂರು ಇಲ್ಲಿಯ ಮುಖ್ಯೋಪಾಧ್ಯಾಯಿನಿ ಶಾಂತಿ ಲೀನಾ ಪಾಯ್ಸ್ ರವರಿಗೆ , ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸರಕಾರಿ ಶಾಲೆ ನೀರ್ಕಜೆ ಕೇಪು ಇಲ್ಲಿಯ ಬಾಬು ನಾಯ್ಕ ಬಿ ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ಸರಕಾರಿ ಶಾಲೆ ಸರಪಾಡಿ ಇಲ್ಲಿಯ ಆದಮ್ ಸರ್ ಅವರಿಗೆ Sio (ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ) ಪಾಣೆಮಂಗಳೂರು ಶಾಖೆ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಈ ಎಲ್ಲಾ ಶಿಕ್ಷಕರು ಶಾಲೆಯ ಅಭಿವೃದ್ಧಿಗಾಗಿ ತಮ್ಮದೇ ಕೈಯಿಂದ ಹಾಗೂ ಊರಿನ ದಾನಿಗಳ ಸಹಾಯದಿಂದ ಶಾಲೆಯ ಏಳಿಗೆಗಾಗಿ (ಮಕ್ಕಳ ಸಂಖ್ಯೆ ಹೆಚ್ಚಳ,ಶಾಲೆಗೆ ಹೊಸ ಕುರ್ಚಿ/ ಮೇಜು,ನೆಲಕ್ಕೆ ಟೈಲ್ಸ್ , ಸ್ಮಾರ್ಟ್ ಕ್ಲಾಸ್,ಗಣಕಯಂತ್ರ ವ್ಯವಸ್ಥೆ,ಮಕ್ಕಳ ಲೈಬ್ರೆರಿ, ಕುಡಿಯುವ ನೀರಿನ ವ್ಯವಸ್ಥೆ,ಆಟದ ಮೈದಾನ ವ್ಯವಸ್ಥೆ, ಹೊಸ ತರಗತಿ ಕಟ್ಟಡ, ಶಾಲೆಯ ಆದಾಯಕ್ಕಾಗಿ ಕೃಷಿ ತೋಟ ಇತ್ಯಾದಿ) ತುಂಬಾ ಶ್ರಮಪಟ್ಟು ಶಾಲೆಯ ಅಭಿವೃದ್ದಿಯನ್ನು ಮಾಡಿರುತ್ತಾರೆ. ಇವರು ನಡೆಸಿದ ಈ ಸೇವೆಗಳಿಗೆ ಇದೀಗ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದ್ದು, ಇವರ ಈ ಎಲ್ಲಾ ಸಾಧನೆಗಳನ್ನು ಗುರುತಿಸಿ Sio ಪಾಣೆಮಂಗಳೂರು ಶಾಖೆ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭ ರಿಝ್ವಾನ್ (ಜಿಲ್ಲಾ ಅಧ್ಯಕ್ಷರು sio ದಕ್ಷಿಣ ಕನ್ನಡ) ರಾಫಿ, ಹನೀನ್, ಯಾಸೀನ್ , ಇಸ್ಮಾಯಿಲ್, ಸಲ್ವಾನ್, ಅಬ್ದುಲ್ ರಹಮಾನ್ ಮತ್ತು ಮುತಾಹರ್ ಉಪಸ್ಥಿತರಿದ್ದರು.







