ರಾಜ್ಯೋತ್ಸವ ಸಂದರ್ಭ ದ.ಕ. ಜಿಲ್ಲಾಡಳಿತದಿಂದ ಸನ್ಮಾನಿಸಲ್ಪಟ್ಟ ಎಸ್‌ವೈಎಸ್ ಘಟಕಕ್ಕೆ ಅಭಿನಂದನೆ

ಮಂಗಳೂರು, ನ.29 : ಬಡ ಹೆಣ್ಣು ಮಕ್ಕಳ ಉಚಿತ ವಿವಾಹ, ಆಹಾರ ವಸ್ತುಗಳ ವಿತರಣೆ ಸಹಿತ ವಿವಿಧ ಸಮಾಜ ಸೇವೆಗಳ ಮೂಲಕ ಮನೆ ಮಾತಾಗಿರುವ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ಮುಡಿಪು ಘಟಕವು ಈ ಬಾರಿ ರಾಜ್ಯೋತ್ಸವ ಸಂದರ್ಭ ದ.ಕ.ಜಿಲ್ಲಾಡಳಿತದಿಂದ ಸನ್ಮಾನಿಸಲ್ಪಟ್ಟ ಹಿನ್ನೆಲೆಯಲ್ಲಿ ಎಸ್‌ವೈಎಸ್ ರಾಜ್ಯ ಸಮಿತಿಯ ವತಿಯಿಂದ ಅಭಿನಂದಿಸಲ್ಪಟ್ಟಿತು.
ಮಂಗಳೂರಿನ ಎಸ್‌ವೈಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸೈಯದ್ ಇಲ್ಯಾಸ್ ತಂಞಳ್ ಎಮ್ಮೆಮಾಡು ಅಭಿನಂದನಾ ಪತ್ರ ನೀಡಿದರು.
ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಅಭಿನಂದನಾ ಭಾಷಣ ಮಾಡಿದರು. ಮುಡಿಪು ಘಟಕದ ಸ್ಥಾಪಕ ಕಾರ್ಯದರ್ಶಿ ಎಂ.ಎ.ಸಿದ್ದೀಕ್ ಸಖಾಫಿ ಮೂಳೂರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮಾಜಿ ರಾಜ್ಯಾಧ್ಯಕ್ಷರಾದ ಜಿ.ಎಂ.ಕಾಮಿಲ್ ಸಖಾಫಿ, ಡಾ.ಝೈನಿ ಕಾಮಿಲ್, ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ, ಮುಡಿಪು ವಲಯಾಧ್ಯಕ್ಷ ಉಸ್ಮಾನ್ ಸಖಾಫಿ, ಕೆಸಿಎಫ್ ಮಾಜಿ ಅಧ್ಯಕ್ಷ ಡಾ. ಶೇಖ್ಬಾವ ಮತ್ತಿತರರು ಉಪಸ್ಥಿತರಿದ್ದರು.
ಮನ್ಸೂರ್ ಅಲಿ ಕೋಟೆಗದ್ದೆ ಸ್ವಾಗತಿಸಿದರು. ಅಬ್ದುರ್ರಹ್ಮಾನ್ ರಝ್ವಿ ವಂದಿಸಿದರು.





