ಫ್ರೀಡಂ ಹೆಲ್ತಿ ಸನ್ ಫ್ಲವರ್ ಆಯಿಲ್ ‘ಧ್ಯಾನ್ ಸೆ ಲೀಜಿಯೆ’ಗೆ ಗ್ರಾಹಕರ ಮೆಚ್ಚುಗೆ
1.40 ಕೋಟಿ ಮಂದಿ ವೀಕ್ಷಣೆ ಪಡೆದ ಯಶ್-ರಾಧಿಕಾ ಜಾಹೀರಾತು

ಮಂಗಳೂರು, ಸೆ.27: ಫ್ರೀಡಂ ಹೆಲ್ತಿ ಕುಕ್ಕಿಂಗ್ ಆಯಿಲ್ ‘ಧ್ಯಾನ್ ಸೆ ಲೀಜಿಯೆ’ ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ. ಗುಣಮಟ್ಟದ ಅಡುಗೆ ಎಣ್ಣೆ ಖರೀದಿಸಲು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಕೈಗೊಂಡ ಅಭಿಯಾನದ ಪ್ರಯುಕ್ತ ವಿನ್ಯಾಸಗೊಳಿಸಲಾದ ‘ಯಶ್-ರಾಧಿಕಾ’ ಜಾಹೀರಾತನ್ನು ಈಗಾಗಲೆ 1.40 ಕೋಟಿ ಮಂದಿ ವೀಕ್ಷಿಸಿರುವುದು ಗಮನಾರ್ಹವಾಗಿದೆ.
ಸೂರ್ಯಕಾಂತಿ ಎಣ್ಣೆ ಖರೀದಿಸುವಾಗ ಎಚ್ಚರಿಕೆಯ ಆಯ್ಕೆಗೆ ಪ್ರಾಮುಖ್ಯತೆ ನೀಡಿ ಫ್ರೀಡಂ ಹೆಲ್ತಿ ಕುಕ್ಕಿಂಗ್ ಆಯಿಲ್ ಖರೀದಿಗೆ ಗ್ರಾಹಕರನ್ನು ಪ್ರೇರೇಪಿಸಲು ‘ಧ್ಯಾನ್ ಸೇ ಲೀಜಿಯೆ’ ಎಂಬ ಅಭಿಯಾನ ಆರಂಭಿಸಲಾಯಿತು. ಫ್ರೀಡಂ ಕುಕ್ಕಿಂಗ್ ಆಯಿಲ್ ಬ್ರ್ಯಾಂಡ್ ಅಂಬಾಸಿಡರ್ ಯಶ್ ಮತ್ತು ರಾಧಿಕಾ ಅವರೊಂದಿಗಿನ ಈ ಜಾಹೀರಾತು ತಮ್ಮ ಆದ್ಯತೆಯ ಖಾದ್ಯ ತೈಲವನ್ನು ಎಚ್ಚರಿಕೆಯಿಂದ ಖರೀದಿಸಲು ಮತ್ತು ಗ್ರಾಹಕರು ಸೇವಿಸುವ ಖಾದ್ಯ ತೈಲದ ಗುಣಮಟ್ಟ ಖಚಿತಪಡಿಸಿಕೊಳ್ಳಲು ಸಂವೇದನಶೀಲರಾಬೇಕೆಂಬ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಅಭಿಯಾನ ಹಾಸ್ಯ ಮತ್ತು ಸ್ಮಾರ್ಟ್ ಸಂದೇಶದ ಕಾರಣದಿಂದ ಗ್ರಾಹಕರನ್ನು ಸೆಳೆಯುತ್ತಿದೆ. ಡಿಜಿಟಲ್ ಮತ್ತು ಇತರ ಪ್ಲಾರ್ಟ್ ಫಾರ್ಮ್‌ಗಳಾದ್ಯಂತ 14 ಮಿಲಿಯನ್ (1ಕೋಟಿ 40 ಲಕ್ಷ)ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಈ ಜಾಹೀರಾತಿನಲ್ಲಿ ಯಶ್ ಮತ್ತು ರಾಧಿಕಾ, ಸೂರ್ಯಕಾಂತಿ ಎಣ್ಣೆ ಆಯ್ಕೆ ಮಾಡುವಾಗ ಯೋಚಿಸಿ ಆಯ್ಕೆ ಮಾಡುವಂತೆ ಸಂದೇಶ ಸಾರುತ್ತಾರೆ. ರಾಧಿಕಾ ಪಾತ್ರ ಮೊದಲನೆಯದಾಗಿ ಅಗ್ಗದ ಸೂರ್ಯಕಾಂತಿ ಎಣ್ಣೆ ತೆಗೆದುಕೊಳ್ಳಲು ಮುಂದಾಗು ವುದು ಮತ್ತು ಯಶ್ ಶೇ.100 ಶುದ್ಧ ಆರೋಗ್ಯಕರ ಸೂರ್ಯಕಾಂತಿ ಎಣ್ಣೆ ಖರೀದಿಗೆ ಪ್ರೇರೇಪಿಸುವ ಮೂಲಕ ಎಣ್ಣೆ ಖರೀದಿಯಲ್ಲಿ ಜಾಗೃತರಾಗಿರಲು ಸೂಚಿಸುತ್ತಾರೆ. ಪ್ರಚಾರದ ಮುಖ್ಯ ಉದ್ದೇಶವನ್ನು ಈ ಜಾಹೀರಾತಿನಲ್ಲಿ ಸರಳ ಮತ್ತು ಪರಿಣಾಮಕಾರಿಯಾಗಿ ಹೇಳಲಾಗಿದೆ. ಎಲ್ಲಾ ಸೂರ್ಯಕಾಂತಿ ಎಣ್ಣೆ ಪ್ಯಾಕೆಟ್‌ಗಳು ಅಥವಾ ಹಳದಿ ಬಣ್ಣದ ಪ್ಯಾಕೆಟ್‌ಗಳು ಶುದ್ಧ ಸೂರ್ಯಕಾಂತಿ ಎಣ್ಣೆ ಹೊಂದಿರುವುದಿಲ್ಲ. ಎಣ್ಣೆ ಖರೀದಿಸುವಾಗ ಎಚ್ಚರಿಕೆ ವಹಿಸದಿದ್ದರೆ ಅಪಾಯವುಂಟಾಗಬಹುದು. ಜಾಣ್ಮೆಯಿಂದ ಖರೀದಿಸುವುದು ಮುಖ್ಯವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ವಿಶ್ವಾಸಾರ್ಹ ಬ್ರ್ಯಾಂಡ್ ಆಯ್ಕೆ ಮಾಡಿ ಎಂಬು ದನ್ನು ಜಾಹೀರಾತು ಸಾರುತ್ತದೆ.
ಸಣ್ಣ ಆಯ್ಕೆಗಳು ಸಹ ಒಬ್ಬರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು ಎಂದು ತಿಳಿಸುವುದು ‘ಧ್ಯಾನ್ ಸೆ ಲೀಜಿಯೆ’ ಜಾಹೀರಾತಿನ ಪರಿಕಲ್ಪನೆಯಾಗಿದೆ.
‘ಫ್ರೀಡಂ ಆರೋಗ್ಯಕರ ಅಡುಗೆ ಎಣ್ಣೆಗಳು ಮಾರುಕಟ್ಟೆಯಲ್ಲಿ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಹೆಸರು ವಾಸಿಯಾಗಿದೆ. ನಮ್ಮ ಉತ್ಪನ್ನಗಳ ಶ್ರೇಣಿಯು ಶುದ್ಧತೆ ಮತ್ತು ಆರೋಗ್ಯಕ್ಕೆ ಹೆಸರುವಾಸಿಯಾಗಿದೆ. ಆರೋಗ್ಯ ಪ್ರಜ್ಞೆಯ ಗ್ರಾಹಕರಿಗೆ ವಿಶ್ವಾಸಾರ್ಹ ಆಯ್ಕೆಯಾಗಿ ಬ್ರ್ಯಾಂಡ್ ತನ್ನನ್ನು ಸ್ಥಾಪಿಸಿದೆ. ನಮ್ಮ ಬ್ರ್ಯಾಂಡ್ ರಾಯಭಾರಿಗಳಾದ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಜತೆಗಿನ ‘ಧ್ಯಾನ್ ಸೆ ಲೀಜಿಯೆ’ ಅಭಿಯಾನ ಗ್ರಾಹಕರ ಆರೋಗ್ಯ ಮತ್ತು ಕ್ಷೇಮಕ್ಕೆ ಕೊಡುಗೆ ನೀಡುವ ಉಪಕ್ರಮವಾಗಿದೆ. ಸನ್ ಫ್ಲವರ್ ಎಣ್ಣೆ ಆಯ್ಕೆ ಮಾಡುವಾಗ ಫ್ರೀಡಂ ರಿಫೈನ್ಡ್ ಸನ್ ಫ್ಲವರ್ ಆಯಿಲ್ ಅನ್ನು ಜಾಗರೂಕತೆಯಿಂದ ಆಯ್ಕೆ ಮಾಡಲು ಜಾಹೀರಾತು ತಿಳಿಸುತ್ತದೆ. ಗ್ರಾಹಕರು ಹಳದಿ ಬಣ್ಣ ಅಥವಾ ಪ್ಯಾಕ್‌ನಲ್ಲಿರುವ ಸೂರ್ಯಕಾಂತಿ ಚಿತ್ರವನ್ನು ನೋಡಿ ಮೋಸಹೋಗಬಾರದು ಬ್ರ್ಯಾಂಡ್ ಪರಿಶೀಲಿಸಿ ಖಚಿತಪಡಿಸಿಕೊಂಡು ಖರೀದಿಸ ಬೇಕು. ಆರೋಗ್ಯಕ್ಕೆ ಆದ್ಯತೆ ನೀಡಿ ಜಾಗರೂಕತೆಯಿಂದ ಆಯ್ಕೆ ಮಾಡಿ ಸುರಕ್ಷಿತವಾಗಿರಿ’ ಎಂದು ಫ್ರೀಡಂ ಹೆಲ್ತ್ ಅಡುಗೆ ಎಣ್ಣೆಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷ ಪಿ.ಚಂದ್ರಶೇಖರ ರೆಡ್ಡಿ ತಿಳಿಸಿದ್ದಾರೆ.







