ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿ.8ರಿಂದ 11ರ ತನಕ ದಿನನಿತ್ಯ 8 ಇಂಡಿಗೊ ವಿಮಾನಗಳ ಯಾನ ರದ್ದು

ಇಂಡಿಗೋ | Photo Credit : PTI
ಮಂಗಳೂರು , ಡಿ.7: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿನನಿತ್ಯ ಆಗಮಿಸುವ ಮತ್ತು ನಿರ್ಗಮಿಸುವ ಇಂಡಿಗೊದ 8 ವಿಮಾನಗಳ ಯಾನ ಡಿ.8 ರಿಂದ 11ರ ತನಕ ರದ್ದಾಗಿದೆ.
ಮಂಗಳೂರಿಗೆ ದಿನನಿತ್ಯ ಆಗಮಿಸುವ ಇಂಡಿಗೊದ ಬೆಂಗಳೂರು -ಮಂಗಳೂರು ( 6ಇ 6858)ಬೆಳಗ್ಗೆ 7:10, ಮುಂಬೈ -ಮಂಗಳೂರು(6ಇ 6674) ಬೆಳಗ್ಗೆ 8:40, ಬೆಂಗಳೂರು -ಮಂಗಳೂರು (6ಇ109) ಸಂಜೆ 5:20 ಮತ್ತು ಬೆಂಗಳೂರು -ಮಂಗಳೂರು (6ಇ6119) ರಾತ್ರಿ 10:15ಕ್ಕೆ ಆಗಮಿಸುವ ವಿಮಾನಗಳು ರದ್ದಾಗಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ಬೆಳಗ್ಗೆ 7:40ಕ್ಕೆ ಹೊರಡುವ ಮಂಗಳೂರು -ಬೆಂಗಳೂರು (6ಇ 306), ಬೆಳಗ್ಗೆ 9:10 ಮಂಗಳೂರು-ಮುಂಬೈ (6ಇ6205) , ಸಂಜೆ 5:50ರ ಮಂಗಳೂರು-ಬೆಂಗಳೂರು (6ಇ388), ರಾತ್ರಿ 10:45ಕ್ಕೆ ನಿರ್ಗಮಿಸುವ ಮಂಗಳೂರು-ಬೆಂಗಳೂರು (6ಇ6120) ವಿಮಾನಗಳ ಯಾನ ರದ್ದಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
Next Story





