ಡ್ಯಾಶಿಂಗ್ ಡಾಲ್ಫಿನ್ಸ್’ ಅಂತರ್ ಶಾಲಾ ಈಜು ಸ್ಪರ್ಧೆ: ಗೊನ್ಝಾಗ ಶಾಲೆಗೆ ಸಮಗ್ರ ಪ್ರಶಸ್ತಿ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳ ಒಕ್ಕೂಟದ ಅಂತರ್ ಶಾಲಾ ಈಜು ಸ್ಪರ್ಧೆ ‘ಡ್ಯಾಶಿಂಗ್ ಡಾಲ್ಫಿನ್ಸ್-2023’ ಐಕ್ಸ್ ಸೈಂಟ್ ಅಲೋಶಿಯಸ್ ಕಾಲೇಜು ಈಜುಕೊಳದಲ್ಲಿ ನಡೆಯಿತು.
ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು ಸಮಗ್ರ ಶಾಲಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಯೆನೆಪೊಯ ಶಾಲೆ ಪ್ರಥಮ ರನ್ನರ್ ಅಪ್ ಮತ್ತು ಶಾರದಾ ವಿದ್ಯಾಲಯ ದ್ವಿತೀಯ ರನ್ನರ್ ಅಪ್ ಆಗಿ ಹೊರಹೊಮ್ಮಿತು.
ದಕ್ಷಿಣ ಕನ್ನಡದ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಅಸೋಸಿಯೇಷನ್‌ನೊಂದಿಗೆ ಸಂಯೋಜಿತವಾಗಿರುವ 34 ಶಾಲೆಗಳ 331 ವಿದ್ಯಾರ್ಥಿಗಳು ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸ್ವಿಮ್ ಅಕಾಡೆಮಿಯ ನಿರ್ದೇಶಕ ಪಾರ್ಥ ವಾರಣಾಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಂ. ಫಾ. ಮೆಲ್ವಿನ್ ಜೋಸೆಫ್ ಪಿಂಟೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂತ ಅಲೋಶಿಯಸ್ ಕಾಲೇಜಿನ ಸಂಶೋಧನ ಸಂಯೋಜಕ ರೆ.ಫಾ.ಮೆಲ್ವಿನ್ ಡಿ ಕುನ್ಹಾ ಎಸ್ಜೆ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಅಲೋಶಿಯಸ್ ಗೊನ್ಜಾಗ ಶಾಲೆಯ ಪ್ರಾಂಶುಪಾಲ ರೆ.ಫಾ. ಮೆಲ್ವಿನ್ ಅನಿಲ್ ಲೋಬೋ ಎಸ್.ಜೆ ಅವರು ಸ್ವಾಗತಿಸಿ ದರು. ಉಪಪ್ರಾಂಶುಪಾಲೆ ಲಾರೆಲ್ ಡಿಸೋಜ ವಂದಿಸಿದರು.ದೈಹಿಕ ಶಿಕ್ಷಣ ಶಿಕ್ಷಕಿ ಆಗ್ನೆಸ್ ಸಂಯೋಜಿಸಿದರು ಮತ್ತು ವಿನೋದ್, ಆದಿತ್ಯ ಶೆಟ್ಟಿ ಮತ್ತು ಆಶಾ ಸಹಕರಿಸಿದರು.